ಕಿಚ್ಚನ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಚಿತ್ರತಂಡದಿಂದ ಸರ್ಪ್ರೈಸ್

1 min read

ಸಿನಿಮಾ: ಇದೇ ಏಪ್ರಿಲ್ 15 ಬೆಳಿಗ್ಗೆ 11.10 ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಚಿತ್ರತಂಡದ ಕಡೆಯಿಂದ ಒಂದು ಸರ್ಪ್ರೈಸ್ ಕಾದಿದೆ.

ಸರ್​ಪ್ರೈಸ್​ ವಿಚಾರದ ಬಗ್ಗೆ ಕಿಚ್ಚ ಸುದೀಪ್​ ಇಂದು ಟ್ವೀಟ್​ ಮಾಡಿದ್ದಾರೆ. ಏಪ್ರಿಲ್​ 15ರ 11:10 ಗಂಟೆಗೆ ಸರ್​ಪ್ರೈಸ್​ ಕಾದಿದೆ ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಅಷ್ಟೇ ಅಲ್ಲ, ಈ ಸರ್​ಪ್ರೈಸ್​ ಏನು ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಕಾಡುತ್ತಿದೆ.

ವಿಕ್ರಾಂತ್​ ರೋಣ ಚಿತ್ರವನ್ನು ಅನೂಪ್​ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಾಂತ್​ ರೋಣ ಆಗಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ. ಈ ಮೊದಲು ಸಿನಿಮಾಗೆ ಪ್ಯಾಂಥಮ್​ ಎಂದು ಹೆಸರಿಡಲಾಗಿತ್ತು. ನಂತರ ಈ ಹೆಸರನ್ನು ವಿಕ್ರಾಂತ್​ ರೋಣ ಎಂದು ಮರು ನಾಮಕರಣ ಮಾಡಲಾಗಿತ್ತು. ಅಷ್ಟೇ ಅಲ್ಲ, ಈ ಟೈಟಲ್​ ಅನ್ನು ಬುರ್ಜ್​ ಖಲೀಫಾ ಮೇಲೆ ಅನಾವರಣ ಮಾಡಲಾಗಿತ್ತು ಅನ್ನೊದು ವಿಶೇಷ.

About Author

Leave a Reply

Your email address will not be published. Required fields are marked *