ಈ ವಾರವೂ ಬಿಗ್ಬಾಸ್ಗೆ ಬರಲ್ಲ ಕಿಚ್ಚ ಸುದೀಪ್
1 min readಸಿನಿಮಾ: ಅನಾರೋಗ್ಯದ ಕಾರಣ ಕಳೆದ ವಾರದ ವಾರಂತ್ಯದ ಶೋ ಮಿಸ್ ಮಾಡಿಕೊಂಡಿದ್ದ ಕಿಚ್ಚ ಸುದೀಪ್ ಈ ವೀಕೆಂಡ್ ಸಹ ಕಿಚ್ಚ ಬಿಗ್ ಬಾಸ್ ನಿರೂಪಣೆ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಲಿದ್ದಾರೆ.
ರೆಸ್ಟಲ್ಲಿ ಇರಬೇಕೆಂದು ಡಾಕ್ಟರ್ ಅಡ್ವೈಸ್ ಮಾಡಿದ್ದಾರೆ ಹೀಗಾಗಿ ಈ ವೀಕೆಂಡ್ ಸಹ ಬಿಗ್ ಬಾಸ್ ಮಿಸ್ ಮಾಡಿಕೊಳ್ತೇನೆ ಅಂತ ಸ್ವತಃ ಸುದೀಪ್ ಅವರೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
‘ವೇದಿಕೆಯಲ್ಲಿ ಗಂಟೆಗಟ್ಟಲೆ ನಿಂತು ಶೂಟಿಂಗ್ ಮಾಡಿ, ಎಲ್ಲಾ ಸ್ಪರ್ಧಿಗಳಿಗೂ ನ್ಯಾಯ ಒದಗಿಸಲು ನನಗೆ ಈಗ ಸಾಧ‍್ಯವಾಗದು. ವೈದ್ಯರು ಮತ್ತಷ್ಟು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಾಗಿ ಈ ವಾರವೂ ಬಿಗ್ ಬಾಸ್ ನಲ್ಲಿ ಭಾಗವಹಿಸಲ್ಲ. ನನಗೆ ಸಹಾಯವಾಗಲು ಶೂಟಿಂಗ್ ರದ್ದು ಮಾಡಿದ ಕಲರ್ಸ್ ಕನ್ನಡಗೆ ಧನ್ಯವಾದ ಹೇಳುತ್ತೇನೆ. ನನಗಾಗಿ ಪ್ರಾರ್ಥಿಸುವ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.