ಕೋವಿಡ್ ಕಂಟ್ರೋಲ್’ಗಾಗಿ ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ನಡೆಯಲಿದೆ ಬೃಹತ್ ಅಭಿಯಾನ!
1 min readಮೈಸೂರು: ಮೈಸೂರಿನಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಕಂಟ್ರೋಲ್’ಗಾಗಿ ಕೆ.ಆರ್.ಕ್ಷೇತ್ರದಲ್ಲಿ ಬೃಹತ್ ಅಭಿಯಾನ ನಡೆಯಲಿದೆ.
ಹೌದು ಬೆಂಗಳೂರಿನಲ್ಲಿ ಕೊರೋನಾ ಕಡಿಮೆ ಆಗ್ತಿದ್ರು ಮೈಸೂರಲ್ಲಿ ಹೆಚ್ಚಾಗ್ತಿರೋದು ದುಃಖ ತಂದಿದೆ. ಕೋವಿಡ್ ನಿರ್ವಹಣೆಗೆ ಒಂದು ಪೈಲಟ್ ಯೋಜನೆಗೆ ಸಿದ್ದತೆ ಆಗಿದೆ ಅಂತ ಮೈಸೂರು ಪಾಲಿಕೆಯ ಸುದ್ದಿಗೋಷ್ಠಿಯಲ್ಲಿ ಶಾಸಕ ರಾಮದಾಸ್ ತಿಳಿಸಿದ್ದಾರೆ.
ಒಂದು ಲಕ್ಷ ಜನಕ್ಕೆ ಟೆಸ್ಟಿಂಗ್ ಮಾಡುವ ಯೋಜನೆ ಇದೆ. ಇದಕ್ಕಾಗಿ ಮಹಾನಗರ ಪಾಲಿಕೆ, ವೈದ್ಯರು, ಖಾಸಗಿ ಆಸ್ಪತ್ರೆ, ಸಂಘ ಸಂಸ್ಥೆಗಳು ಕೈ ಜೋಡಿಸಲಿದೆ. ಯುದ್ಧದ ರೀತಿಯಲ್ಲಿ ನಾವು ತ್ವರಿತವಾಗಿ ಈ ಟೆಸ್ಟಿಂಗ್ ಕಾರ್ಯ ಮಾಡಲಿದ್ದೇವೆ. ಜೂ. 16, 17, 18 ಈ ಮೂರು ದಿನವೂ ಟೆಸ್ಟಿಂಗ್ ನಡೆಯಲಿದೆ.
ಪಕ್ಷಬೇಧ ಮರೆತು ನಾವು ಕೆಲಸ ಮಾಡಬೇಕಿದೆ. ಮೈಸೂರಿನ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಕಾರ್ಯಕರ್ತರು ಭಾಗಿಯಾಗಿ. ಜನರನ್ನ ಮನೆಮನೆ ತೆರಳಿ ಕೋವಿಡ್ ಟೆಸ್ಟ್ಗೆ ಕರೆದುಕೊಂಡು ಬರಬೇಕಿದೆ. ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಈ ಬೃಹತ್ ಅಭಿಯಾನ ನಡೆಯಲಿದೆ. 17 ವಾರ್ಡ್ ವ್ಯಾಪ್ತಿಯಲ್ಲಿ ಈ ಯೋಜನೆ ಇರಲಿದೆ. ಮತಗಟ್ಟೆಗೆ ಬನ್ನಿ- ಇದು ವೋಟಿಂಗ್ಗಾಗಿ ಅಲ್ಲ, ಆರೋಗ್ಯಕ್ಕಾಗಿ. 270 ಬೂತ್ಗಳಲ್ಲಿ ಈ ಆರೋಗ್ಯ ತಪಾಸಣೆ ಆಗಲಿದೆ. ಮೊದಲು ಕೆ.ಆರ್.ಕ್ಷೇತ್ರದಲ್ಲಿ ಮಾಡಿ, ನಂತರ ಉಳಿದ ಮೂರು ಕ್ಷೇತ್ರಕ್ಕೆ ಆಗಲಿದೆ. ಈ ಯೋಜನೆಗಾಗಿ ನೂರು ವಾಹನಗಳು ಸಿದ್ದವಾಗಿರಲಿದೆ. 400 ಮಂದಿ ವಾಲೆಂಟಿಯರ್ ಆಗಿ ಇದರಲ್ಲಿ ಭಾಗಿಯಾಗ್ತಾರೆ ಅಂತ ರಾಮದಾಸ್ ತಿಳಿಸಿದ್ದಾರೆ.
270 ಮತಗಟ್ಟೆಗಳಲ್ಲೇ ಕೋವಿಡ್ ಟೆಸ್ಟ್. ಈ ಯೋಜನೆ ಮೊದಲೇ ಮಾಡಬೇಕಿತ್ತು ನಿಜ. ಆದರೆ ಸ್ವಲ್ಪ ತಡವಾಗಿದೆ’ ತಡವಾದ್ರು ಇದೀಗಾ ಈ ಯೋಜನೆ ಯಶಸ್ವಿಗೊಳಿಸುತ್ತೇವೆ. ಇದಕ್ಕೆ ಜನರು ಕೂಡ ಸಹಕಾರ ಕೊಟ್ಟರೆ ಮೈಸೂರು ಕೋವಿಡ್ ಮುಕ್ತ ಮಾಡಬಹುದು ಅಂತ ಮೈಸೂರು ಪಾಲಿಕೆಯ ಸುದ್ದಿಗೋಷ್ಠಿಯಲ್ಲಿ ಶಾಸಕ ರಾಮದಾಸ್ ಮಾಹಿತಿ ಹಂಚಿಕೊಂಡಿದ್ದಾರೆ.