ಬಂತು ‘ಬೆಂಕಿ’ ಟ್ರೇಲರ್…ಜುಲೈ 15ಕ್ಕೆ ಸಿನಿಮಾ ರಿಲೀಸ್..ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿ ಅನೀಶ್ ತೇಜೇಶ್ವರ್
1 min readರಾಮಾರ್ಜುನ ಸಿನಿಮಾದ ನಂತರ ಅನೀಶ್ ತೇಜೇಶ್ವರ್ ನಟಿಸ್ತಿರುವ ಬಹುನಿರೀಕ್ಷಿತ ಬೆಂಕಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲವೂ ತುಂಬಿರುವ ಬೆಂಕಿಯಂತಹ ಟ್ರೇಲರ್ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಹಳ್ಳಿ ಬ್ರ್ಯಾಕ್ ಡ್ರಾಪ್ ನಲ್ಲಿ ತಯಾರಾಗಿರುವ ಪಕ್ಕ ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾವಾಗಿರುವ ಬೆಂಕಿ ಬಗ್ಗೆ ಇಡೀ ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.
ಬೆಂಕಿ ನನಗೆ ದೊಡ್ಡ ಚಾಲೆಂಜ್. ನನ್ನದೇ ಪ್ರೊಡಕ್ಷನ್ ಹೌಸ್ ಮೂರನೇ ಸಿನಿಮಾ. ನನ್ನ ಸ್ನೇಹಿತರ ಸಹಕಾರ. ಇವರಿಲ್ಲದೇ ಸಿನಿಮಾ ಮಾಡೋದಿಕ್ಕೆ ಆಗಲಲ್ಲ. ಸಿನಿಮಾ ಮೇಲೆ ನನಗೆ ಪ್ರೀತಿ ಜಾಸ್ತಿ ಇದೆ. ನನಗೆ ಆಫರ್ ಬರುವುದು ನಿಂತಿಲ್ಲ. ಬಟ್ ನನಗೆ ಇಷ್ಟವಾದ ಕಂಟೆಂಟ್ ಬೇಕು. ಪ್ರತಿಯೊಂದು ವಿಭಾಗ ನನ್ನ ಜೊತೆ ಕೈ ಜೋಡಿಸಿದೆ. ಬೆಂಕಿ ನನಗೆ ಬಹಳ ಟಚ್ಚಿಂಗ್ ಸಿನಿಮಾ. ಆಕ್ಟಿಂಗ್ ಮಾಡೋದಕ್ಕಿಂತ ಪ್ರೊಡಕ್ಷನ್ ಮಾಡೋದು ನನಗೆ ಸವಾಲು ಆಗಿತ್ತು. ಅಣ್ಣ-ತಂಗಿ ಸೆಂಟಿಮೆಂಟ್ ಇರುವ ಸಿನಿಮಾ ಇದು.. ಜುಲೈ 15ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಈ ಬಾರಿ ತುಂಬಾ ಕಾನ್ಫಿಡೆನ್ಸ್ ಆಗಿ ಬರ್ತಿದ್ದೇವೆ ಎಂದು ಅನೀಶ್ ತಮ್ಮ ಅನಿಸಿಕೆ ಹಂಚಿಕೊಂಡರು.
ನಿರ್ದೇಶಕ ಶಾನ್ , ತುಂಬಾ ದೊಡ್ಡ ಎಮೋಷನಲ್ ಜರ್ನಿ. ಫ್ಯಾಮಿಲಿ ಬ್ಯಾಕ್ ಡ್ರಾಪ್ ಸಿನಿಮಾ. ನಾವು ಮನೆಯಲ್ಲಿ ಇದ್ದೇವೆ ಎನ್ನುವಂತಿದ್ದು ಇಡೀ ಜರ್ನಿ. ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಸಿನಿಮಾದಲ್ಲಿದೆ. ಕಂಪ್ಲೀಟ್ ಮಾಸ್ ಪ್ಯಾಕೇಜ್ ಸಿನಿಮಾ. ಈ ಪ್ರೊಡಕ್ಷನ್ ಹೌಸ್ ನಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರ್ತಿವೆ. ಹೊಸ ಹೊಸ ಹುಡ್ಗರಿಗೆ ಅವಕಾಶ ಕೊಡ್ತಿರುವ ಅನೀಶ್ ಸರ್ ಗೆ ಒಳ್ಳೆದಾಗಲಿ ಎಂದರು.
ವಿಂಕ್‌ವಿಷಲ್ ಪ್ರೊಡಕ್ಷನ್ ಬ್ಯಾನರ್ ಮೂಲಕ ಅನೀಶ್ ಬೆಂಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಅಣ್ಣ ತಂಗಿ ಸೆಂಟಿಮೆಂಟ್ ಕತೆ ಹೊಂದಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಎ.ಆರ್. ಬಾಬು ಪುತ್ರ ಶಾನ್ ಆಕ್ಷನ್ ಕಟ್ ಹೇಳಿದ್ದು ಇದು ಅವರ ಮೊದಲ ಚೊಚ್ಚಲ ಸಿನಿಮಾವಾಗಿದೆ. ಅನೀಶ್‌ಗೆ ನಾಯಕಿಯಾಗಿ ‘ರೈಡರ್’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ ನಟಿಸಿದ್ದು, ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ.