ಸೆರೆ ಹಿಡಿದ ಕರಡಿಯನ್ನ ಚಿಪ್ ಅಳವಡಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು!
1 min readಮೈಸೂರು / ಕೊಡಗು : ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ ಮಾಡಿದ್ದ ಕರಡಿಯನ್ನು ಮರಳಿ ಕಾಡಿಗೆ ಬಿಡಲಾಗಿದೆ. ಆದರೆ ಕಾಡಿಗೆ ಬಿಟ್ಟ ತಕ್ಷಣವೇ ಕ್ಯಾಮೆರಾದ ಕಡೆಗೆ ಓಡಿ, ಕ್ಯಾಮೆರಾಗೆ ಪೋಸ್ ನೀಡಿ ಕಾಡಿನತ್ತ ಕರಡಿ ಸಾಗಿರುವ ಘಟನೆ ನಡೆದಿದೆ.
ಕಾಫಿ ತೋಟದಲ್ಲಿ ಸೆರೆ ಸಿಕ್ಕಿದ್ದ ಕರಡಿಯನ್ನ ಕಳ್ಳಹಳ್ಳ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಎರಡು ದಿನದ ಹಿಂದೆ ರಕ್ಷಣೆ ಮಾಡಿದ್ದ ಕರಡಿಯನ್ನ ನಾಗರಹೊಳೆ ಅರಣ್ಯ ಪ್ರದೇಶದ ಕಲ್ಲಹಳ್ಳಕ್ಕೆ ಬಿಡಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾಫಿ ತೋಟದ ತಂತಿ ಬೇಲಿಗೆ ಸಿಲುಕಿತ್ತು.
ಈ ವೇಳೆ ಕರಡಿಗೆ ಅರೆವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಲಾಗಿತ್ತು. ರಕ್ಷಣೆ ಬಳಿಕ ಚೇತರಿಕೆ ಕಂಡಿದ್ದ ಕರಡಿಗೆ ಚಿಪ್ ಅಳವಡಿಸಿ ಕಾಡಿಗೆ ಬಿಡಲಾಗಿದೆ.