ಮಾರ್ಷಲ್‌ಗಳಿಗೆ ಟಾರ್ಗೆಲ್‌ ಫಿಕ್ಸ್ ಆಗಿದೆ’ ಮಾಸ್ಕ್ ಹಾಕಿ ಜೋಪಾನ!

1 min read

ಬೆಂಗಳೂರು : ಟ್ರಾಫಿಕ್ ಸಿಟಿ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ನಿತ್ಯವೂ ಏರಿಕೆ ಆಗುತ್ತಲೇ ಇದ್ದು, ಬಿಬಿಎಂಪಿ ಮಾರ್ಷಲ್ಸ್ ಗಳಿಗೆ ಇದೀಗಾ ಟಾರ್ಗೆಟ್ ಫಿಕ್ಸ್ ಆಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ್ರೆ ವಿಧಿಸುವ ದಂಡ ಸಂಖ್ಯೆ ಹೆಚ್ಚಿಸಲು ಮಾರ್ಷಲ್ಸ್ ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ ಎನ್ನಲಾಗಿದೆ.


ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ರೆ ಭಾರೀ ದಂಡ‌ ಹಾಕಲು ಬಿಬಿಎಂಪಿ ಮಾರ್ಷಲ್ಸ್ ಗಳು ಸಿದ್ದರಾಗಿದ್ದಾರೆ. ಹೀಗಾಗಿ ಮಾರ್ಷಲ್ಸ್ ಗಳು ಇಂದಿನಿಂದ ಮತ್ತಷ್ಟು ಆಯಕ್ಟೀವ್ ಆಗಲಿದ್ದಾರೆ.


ಬೆಂಗಳೂರಿಗರು ಮಾಸ್ಕ್ ಇಲ್ಲದೆ ಹೊರ ಹೋಗುವ‌ ಮುನ್ನ ಎಚ್ಚರವಾಗಿರಬೇಕಾಗಿದೆ. ಜನಸಂದಣಿ ಪ್ರದೇಶಗಳು, ಮಾರ್ಕೆಟ್, ಸಿಗ್ನಲ್, ಮಾಲ್, ಥಿಯೇಟರ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಲ್‌ಗಳಲ್ಲಿ ಮಾರ್ಷಲ್ಸ್ ಗಳು ಕಾರ್ಯಾಚರಣೆ ನಡೆಸಲಿದ್ದಾರೆ.

ರಾಜಧಾನಿಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗಿದ್ರೂ ಬಹಳಷ್ಟು ಮಂದಿ ಮಾಸ್ಕ್ ಹಾಕ್ತಿಲ್ಲ ಮತ್ತೆ ಸಾಮಾಜಿಕ ಅಂತರ ಪಾಲಿಸ್ತಿಲ್ಲ ಹೀಗಾಗಿ ತಜ್ಞರ ಸಲಹೆಯಂತೆ ಕಟ್ಟುನಿಟ್ಟಿನ ‌ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ದಂಡದ ಮೊತ್ತ‌ ಹೆಚ್ಚಳ‌ ಇಲ್ಲ ಬದಲಾಗಿ ನಿತ್ಯ ವಿಧಿಸುವ ಸಂಖ್ಯೆ ಹೆಚ್ಚಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *