ಬಿಎಸ್‌ವೈ ಪ್ರಶ್ನಾತೀತ ನಾಯಕ: ಹೇಮಂತ್ ಕುಮಾರ್ ಗೌಡ.

1 min read

ಬಿಎಸ್‌ವೈ ಪ್ರಶ್ನಾತೀತ ನಾಯಕ: ಹೇಮಂತ್ ಕುಮಾರ್ ಗೌಡ.

ಬಿ ಎಸ್ ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಬಿ ಎಸ್ ಯಡಿಯೂರಪ್ಪನವರ 79ನೇ ಜನ್ಮದಿನಾಚರಣೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪರಿಸರ ಸ್ನೇಹಿ ತಂಡದ ಸಹಯೋಗದೊಂದಿಗೆ ಬೆಳಿಗ್ಗೆ ಜಲಪುರಿ ಪೊಲೀಸ್ ಕ್ವಾರ್ಟ್ರಸ್‌ನ ಗಣಪತಿ ದೇವಸ್ಥಾನ ಆವರಣದಲ್ಲಿ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿರವರು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ 101ಗಣಪತಿ ದೇವಸ್ಥಾನದಲ್ಲಿ ಬಿಎಸ್‌ವೈ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಸಾರ್ವಜನಿಕರಿಗೆ
ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್ ನೇತೃತ್ವದಲ್ಲಿ ಸಿಹಿ ವಿತರಿಸಲಾಯಿತು.

ಬಳಿಕ ದೊಡ್ಡ ಮಾರ್ಕೆಟ್ ಚಿಕ್ಕಗಡಿಯಾರ ಬಳಿ ಬೇಸಿಗೆ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಹಾಗೂ ಮೈಲಾಕ್ ಅಧ್ಯಕ್ಷ ರಾದ ಎನ್ ವಿ ಫಣೀಶ್ ಮತ್ತು ಸ್ಥಳೀಯ ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ನೇತೃತ್ವದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ 100 ಕೊಡೆ ವಿತರಿಸಲಾಯಿತು. ನಂತರ
ನಂಜುಮಳಿಗೆ ವೃತ್ತದಲ್ಲಿ ಗೋ ಪೂಜೆ ಸಲ್ಲಿಸಿ ಗೋವುಗಳಿಗೆ ಮೇವು, ಬೆಲ್ಲ ಆಹಾರ ಪೂರೈಕೆ ಮಾಡಲಾಯಿತು.

ಮುಂದುವರೆದಂತೆ, ಸ್ವಾತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಮುಡಾ ಸದಸ್ಯರಾದ ನವೀನ್ ಕುಮಾರ್ ನೇತೃತ್ವದಲ್ಲಿ ವಿವಿಧ
ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಕೇಸರಿ ಬಾವುಟ ಹಾರಿಸಲು ಮುನ್ನುಡಿ ಬರೆದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿಜಕ್ಕೂ ಬಿಜೆಪಿಯ ಪ್ರಶ್ನಾತೀತ ನಾಯಕ ಎನಿಸಿಕೊಂಡಿದ್ದಾರೆಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಹೇಳಿದರು.

ವಿಧಾನಸಭೆಯಲ್ಲಿ ಕೇವಲ 2 ಸ್ಥಾನದಿಂದ ಆರಂಭವಾದ ಬಿಜೆಪಿ ಹೋರಾಟಕ್ಕೆ ಸಮಗ್ರ ಪುಷ್ಟಿ ನೀಡಿ, ಇಡೀ ನಾಡಿನಾದ್ಯಂತ ಸಂಘಟನೆಯಿಂದ ಅಧಿಕಾರ ಹಿಡಿಯಲು ಬಿಎಸ್ ಯಡಿಯೂರಪ್ಪನವರ ಕಾರ್ಯ ನಿಜಕ್ಕೂ ಮೆಚ್ಚಲೇಬೇಕಾದದು. ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ದೀನ ದಲಿತರಿಗೆ ಮತ್ತು ರೈತಾಪಿ ವರ್ಗ, ಕೂಲಿ ಕಾರ್ಮಿಕರ ಪರ, ಜನಪರ ಯೋಜನೆಗಳನ್ನು ಜಾರಿ ಮಾಡಿ ಅಭಿವೃದ್ಧಿಯ ಹರಿಕಾರ ಮತ್ತು ನಿಜವಾದ ಮಣ್ಣಿನ ಮಗ ಎನಿಸಿಕೊಂಡಿದ್ದಾರೆ ಎಂದರು.

ನಂತರ ಮಾತನಾಡಿದ ಬಿಜೆಪಿ ಯುವಮುಖಂಡರಾದ ಕಾಂತೇಶ್ ಈಶ್ವರಪ್ಪ, ರಾಜ್ಯಕ್ಕೆ ಬಿಎಸ್‌ವೈ ಕೊಡುಗೆ ಬಹಳಷ್ಟಿದ್ದು ರಾಜ್ಯದಲ್ಲಿ ರೈತರಿಗೆ ಸಂಕಷ್ಟ ಎದುರಾದಾಗ ಎಂತಹಾ ಪರಿಸ್ಥಿತಿಯಲ್ಲೂ ರೈತಪರ ಅನೇಕ ಹೋರಾಟಗಳನ್ನು ಹಮ್ಮಿಕೊಂಡು ಬಂದವರು ಬಿ.ಎಸ್.ಯಡಿಯೂರಪ್ಪ ನವರು, ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಿರುವುದಾಗಲಿ, ಶಾಲೆಗೆ ತೆರಳುವ ರೈತರ ಮಕ್ಕಳಿಗೆ ಸೈಕಲ್ ವಿತರಣೆಯಾಗಿರಬಹುದು, ರೈತರ ಕೃಷಿಸಾಲ ಮನ್ನಾ ಆಗಿರಬಹುದು, ಇನ್ನೂ ಅನೇಕ ರೈತಪರ ಹೋರಾಟಗಳಿರಬಹುದು, ಇದು ರಾಜ್ಯದ ಜನತೆಯ ಮನದಲ್ಲಿ ಮುಂದೆಂದಿಗೂ ಅಳಿಸದಂತೆ ಬೇರೂರಿರಿದೆ ಎಂದರು.

ಈ ವೇಳೆ ಶಾಸಕರಾದ ಎಲ್ ನಾಗೇಂದ್ರ, ಬಿಜೆಪಿ ಯುವ ಮುಖಂಡ ಕಾಂತೇಶ್ ಈಶ್ವರಪ್ಪ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಮೈಸೂರು ಪೇಂಟ್ಸ್ & ವಾರ್ನಿಷ್ ನಿಗಮ ಮಂಡಳಿ ಅಧ್ಯಕ್ಷರಾದ ಫಣೀಶ್, ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಮಾ ವಿ ರಾಮ್ ಪ್ರಸಾದ್, ಸೌಮ್ಯ ಉಮೇಶ್, ಮೃಗಾಲಯ ಪ್ರಾಧಿಕಾರ ಸದಸ್ಯೆ ಜ್ಯೋತಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ನವೀನ್ ಕುಮಾರ್, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷರಾದ ಬಿ ಎಂ ರಘು, ಹಿಂದುಳಿದ ವರ್ಗದ ನಗರಾಧ್ಯಕ್ಷ ಜೋಗಿ ಮಂಜು, ಕೆಜೆ ರಮೇಶ್, ಮಾಜಿ ನಗರ ಪಾಲಿಕೆ ಸದಸ್ಯ ಪಾರ್ಥಸಾರಥಿ ಸೇರಿ ಹಲವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *