ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಸೈಕಲ್ ಜಾಥಾ

1 min read

ಮೈಸೂರು,ಫೆ.4-ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ನಗರದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.

ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಜಾಥಾ ಮೂಲಕ ಮಾಡಲಾಯಿತು.

ಭಯಾನಕ ಕ್ಯಾನ್ಸರ್ ರೋಗದಿಂದ ಚೇತರಿಕೆ ಕಂಡು ರಾಜ್ಯಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುತ್ತಿರುವ ರಮೇಶ್ ಬಿಳಿಕೆರೆ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಅವರು ಮಾತನಾಡಿ ಯಾವುದೇ ರೋಗಗಳಿಗೆ ಮಾನಸಿಕ ಧೈರ್ಯವೇ ಅತ್ಯಂತ ಪ್ರಬಲವಾದ ಚಿಕಿತ್ಸೆ. ಯೋಗ, ವ್ಯಾಯಾಮ, ಒಳ್ಳೆಯ ಹವ್ಯಾಸಗಳು ನಮ್ಮನ್ನು ಸುಧಾರಿಸುತ್ತವೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಓವೆಲ್ಸ್ ಮೈದಾನದಿಂದ ಆರಂಭಗೊಂಡ ಸೈಕಲ್ ಜಾಥಾ ಹುಣಸೂರು ರಸ್ತೆ ಮಾರ್ಗವಾಗಿ ಸಾಗಿ, ಮೆಟ್ರೋಪಾಲ್ ಸರ್ಕ್‌ಲ್, ಧನ್ವಂತ್ರ್ಳಿ ರಸ್ತೆ, ಪಶುವೈದ್ಯಕೀಯ ಆಸ್ಪತ್ರೆ, ಅರಸು ರಸ್ತೆಯ ಮುಖಾಂತರ ಬಂದು ಓವೆಲ್ಸ್ ಮೈದಾನದಲ್ಲೇ ಅಂತ್ಯಗೊಂಡಿತು.

ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್, ರವಿ ಭಗೀರಥ್, ಮಂಜುನಾಥ್, ಚಿ.ಮ.ಬಿ.ಆರ್ ಪ್ರಭುಶಂಕರ್, ರವಿ.ಟಿ.ಎಸ್, ದೈಹಿಕ ಶಿ.ವಿಭಾಗ ಮೈ.ವಿ.ವಿ. ಅಕ್ಷಯ ಕ್ರೀಡಾಪಟು, ಡಾ.ಪ್ರಭುಶಂಕರ್, ಮೈಸೂರು ಮೆಡಿಕಲ್ ಸಿಸ್ಟಮ್.ಶ್ರೀಕಾಂತ್, ಭಾಸ್ಕರ್, ಯೋಗ ಶಿಕ್ಷಕರು ಅಕ್ಷಯ,ತೇಜಸ್, ಸಂದೇಶ್, ರಾಕೇಶ, ಸೃಷ್ಟಿ, ಪವನ್, ಮನೋಜ್. ಅರುಣ್,ಸಮರ್ಥ್, ಯತೀಶ್ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *