ಅವಧೂತ ದತ್ತಪೀಠವು ಉತ್ತಮ ಸಮಾಜ ನಿರ್ಮಾಣ, ರಾಷ್ಟ್ರನಿರ್ಮಾಣದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ: ಮೋದಿ ಬಣ್ಣನೆ

1 min read

ಮೈಸೂರು: ಅವಧೂತ ದತ್ತಪೀಠವು ಉತ್ತಮ ಸಮಾಜ ನಿರ್ಮಾಣ,ರಾಷ್ಟ್ರನಿರ್ಮಾಣದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ವರ್ಷದ ಜನ್ಮದಿನದ ಪ್ರಯುಕ್ತ ಇಂದು ವರ್ಚುವಲ್ ಮೂಲಕ ಪ್ರಧಾನಿಯವರು ಸ್ವಾಮೀಜಿ ಅವರಿಗೆ‌ ಶುಭಕಾಮನೆಗಳನ್ನು ಸಲ್ಲಿಸಿ ಮಾತನಾಡಿದರು.

ಮೊದಲಿಗೆ ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಮೋದಿ,ಜಯ ಗುರುದತ್ತ ಅಪ್ಪಾಜಿಅವರಿಗೆ 80 ನೆ ವರ್ಧಂತಿ ಸಂದರ್ಭದ ಲ್ಲಿ ಪ್ರಣಾಮ ಹಾಗೂ ಶುಭಕಾಮನೆಗಳು ಎಂದು ಹೃದಯಪೂರ್ವಕವಾಗಿ ಹೇಳಿದರು. ಶ್ರೀ ಸ್ವಾಮೀಜಿಯವರ ಕಲ್ಯಾಣಕಾರ್ಯಗಳು ಸಂತಸ ತಂದಿದೆ,ಇದು ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹನುಮದ್ವಾರ ಉದ್ಘಾಟನೆ ‌ಆಗಿರುವುದು ಸಂತಸ ಎಂದರು. ಗುರುದೇವ ದತ್ತನ ಪ್ರೇರಣೆಯಿಂದ ಶ್ರೀ ಗಳು ಜನಕಲ್ಯಾಣ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂತರು,ಸಜ್ಜನರು,ವಿಭೂತಿ ಪುರುಷರ ಕಾರ್ಯಗಳು ಇತರರಿಗೆ ಪ್ರೇರಣೆಯಾಗಿದೆ.ಇದಕ್ಕೆ ಶ್ರೀ ಗಣಪತಿ ಸ್ವಾಮೀಜಿ ಪ್ರತ್ಯಕ್ಷ ಉದಾಹರಣೆ ಎಂದು ಬಣ್ಣಿಸಿದರು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಧ್ಯಾತ್ಮಿಕತೆಯ ಜತೆಜತೆಗೆ ಆಧುನಿಕತೆಯೂ ಮೇಳೈಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ನಿರಂತರವಾಗಿದೆ,ಲೋಕಲ್ ಟು ಗ್ಲೋಬಲ್ ವರೆಗೂ ಶ್ರೀ ಸ್ವಾಮೀಜಿಯವರ ಕಾರ್ಯಕ್ಷಮತೆ ಎದ್ದು ಕಾಣುತ್ತಿದೆ ಅವರಿಗೆ ಮತ್ತೊಮ್ಮೆ ಶುಭಕಾಮನೆಗಳು ಎಂದು ನರೇಂದ್ರ ಮೋದಿಯವರು ‌ತಿಳಿಸಿದರು.

ವೇದಿಕೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ,ಹೈದರಾಬಾದ್ ನ ಶ್ರೀ ತ್ರಿದಂಡಿ ಚಿನ್ನ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಅಹೋಬಲ ಸ್ವಾಮೀಜಿ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ,ಮೈಸೂರು ನಗರಾಭಿವೃದ್ಧಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್,ಹೋಟೆಲ್ ಉಧ್ಯಮಿ ರಾಜೇಂದ್ರ ಇದ್ದರು.

About Author

Leave a Reply

Your email address will not be published. Required fields are marked *