ಗೃಹ ಸಚಿವರಿಗೆ ಧನ್ಯವಾದ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್!
1 min readರಾಜ್ಯ ಸರ್ಕಾರದ ಗೃಹ ಸಚಿವರಿಗೆ ಅಣ್ಣಾವ್ರ ಕುಟುಂಬದಿಂದ ಪತ್ರ ಬಂದಿದ್ದು, ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಉಲ್ಲೇಖಿಸಲಾಗಿದೆ. ಪುನೀತ್ ನಿಧನದಿಂದ ನಮ್ಮ ರಾಜ್ಯ ಸೇರಿದಂತೆ ಇಡೀ ವಿಶ್ವವೇ ಒಂದು ಕ್ಷಣ ಅಚ್ಚರಿಗೊಂಡು ದುಃಖದಿಂದ ಕೂಡಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲು ಅಪ್ಪು ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿ ಅಭಿಮಾನಿಗಳಿಗೆ ದರ್ಶನದ ವ್ಯವಸ್ಥೆ ಕಲ್ಪಿಸಿದ್ರಿ. ಇದಕ್ಕಾಗಿ ನಿಮಗೆ ಧನ್ಯವಾದ ಅರ್ಪಿಸುತ್ತೇನೆಂದು ಅಧಿಕೃತ ಪತ್ರದಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಪತ್ರ ಬರೆದು ಸರ್ಕಾರಕ್ಕೆ ರವಾನಿಸಿದ್ದಾರೆ.
ಇದರಿಂದ ದೊಡ್ಡ ಮನೆಯ ಸೊಸೆಯ ದೊಡ್ಡತನ ಏನು ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಲ್ಲದೆ, ಶಾಂತಿಯುತವಾಗಿ ಸಹಕರಿಸಿದ ಅಭಿಮಾನಿಗಳಿಗು ಧನ್ಯವಾದ ಅರ್ಪಿಸಿದ್ದಾರೆ.