ಮುಂದಿನ ವಾರದಿಂದ ಆಶಾಢ ಶುಕ್ರವಾರ ಹಿನ್ನಲೆ: ಭಕ್ತರ ಪ್ರವೇಶ ಬೇಕೋ ಬೇಡವೋ ಎಂದು ಇಂದು ತೀರ್ಮಾನ
1 min readಮೈಸೂರು: ಮುಂದಿನ ವಾರದಿಂದ ಆಶಾಢ ಶುಕ್ರವಾರ ಹಿನ್ನಲೆ ಪ್ರತಿ ಆಶಾಢ ಮಾಸದಲ್ಲು ಲಕ್ಷಾಂತರ ಸಂಖ್ಯೆಯ ಭಕ್ತರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುತ್ತಾರೆ. ಈಗಾಗಿ ಭಕ್ತರ ಪ್ರವೇಶ ಬೇಕೋ ಬೇಡವೋ ಎಂದು ಇಂದು ತೀರ್ಮಾನ ಮಾಡುತ್ತೇವೆ ಅಂತ ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ದೇಗುಲದ ಅರ್ಚಕರು, ಆಡಳಿತ ಮಂಡಳಿ ಬಳಿ ಮಾಹಿತಿ ಪಡೆದಿದ್ದೇನೆ. ಇವತ್ತು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.