ಅಪ್ಪುಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆಗೆ ಸಿದ್ಧತೆ!
1 min readಅಪ್ಪುಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆಗೆ ಸಿದ್ಧತೆ!
ಆಕಾಶದೆತ್ತರದ ಅಭಿಮಾನಕ್ಕೆ ಮೈಸೂರು ಹುಡುಗರ ಯತ್ನ
ಮೈಸೂರು: ಇತ್ತಿಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಜನ್ಮ ದಿನಕ್ಕೆ ರಾಜ್ಯದೆಲ್ಲೆಡೆ ನಾನಾ ಕಾರ್ಯಕ್ರಮ ನಡೆಸುತ್ತಿದ್ದು, ಮೈಸೂರಿನಲ್ಲಿ ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ವಂದನೆ ಸಲ್ಲಿಸಲು ವಿನೂತನ ಪ್ರಯತ್ನ ನಡೆಸಿದ್ದಾರೆ.
ಹೌದು ಮೈಸೂರಿನ ಹುಡುಗರ ತಂಡವೊಂದು ಇಂತಹದೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಹೌದು ಅಭಿಮಾನಿಗಳ ಅಚ್ಚಳಿದು ಉಳಿದಿರುವ ನಟ ಪುನೀತ್ ಗೆ ಮಾ.17ಕ್ಕೆ ಜನ್ಮದಿನ ಆಗಿದೆ. ಇಂತಹ ವೇಳೆಯಲ್ಲಿ ಜಯಲಕ್ಷ್ಮಿ ಪುರಂನ ಅಬಿಡೆಬಿಟ್ ಡಿಆರ್ ಸಿ ಮಾಲ್ ನಲ್ಲಿ ಪುನೀತ್ ಅವರ 70 ಅಡಿ ಕಟೌಟ್ ನಿರ್ಮಿಸಲಾಗುತ್ತಿದೆ. ಮಾತ್ರವಲ್ಲದೆ, ಹೆಲಿಕ್ಯಾಪ್ಟರ್ ಮೂಲಕ ಕಟೌಟ್ ಗೆ ಅರ್ಥ ತಾಸುಗಳ ಕಾಲ ಪುಷ್ಪಾರ್ಚನೆ ಸಲ್ಲಿಸಲು ಎಲ್ಲಾ ರೀತಿಯ ತಯಾರಿಯನ್ನು ಯುವಪಡೆ ಮಾಡಿಕೊಂಡಿದೆ.
ಈಗಾಗಲೇ ಸಂಸದ ಪ್ರತಾಪಸಿಂಹ ಮೂಲಕ ಏರ್ ಪೋರ್ಟ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ನಗರಪೊಲೀಸ್ ಆಯುಕ್ತರ ಅನುಮತಿಯನ್ನು ಸಹ ಪಡೆದುಕೊಂಡಿದ್ದಾರೆ. ಅಂದು ಬೆಳಿಗ್ಗೆ ಯಿಂದ ಸಂಜೆವರೆಗೂ ಡೊಳ್ಳು ಕುಣಿತ, ಅನ್ನ ಸಂತರ್ಪಣೆ ಸೇರಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಸಹ ಯುವ ತಂಡ ಆಯೋಜಿಸಿರುವುದಾಗಿ ತಂಡದ ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ. ಹರ್ಷಿತ್ , ಲಕ್ಷ್ಮಿಕಾಂತ್, ಎಂ.ಎನ್.ಈಶ್ವರ್ ಇನ್ನಿತರರು ಇಂದು ತಮ್ಮ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿದರು.