ನನ್ನ ಒಪ್ಪಿಗೆಯಿಲ್ಲದೆ 25 ರಾಜ್ಯ ವಿವಿಗಳಿಗೆ ಕುಲಪತಿಗಳ ನೇಮಕ: ಪಶ್ಚಿಮ ಬಂಗಾಳ ರಾಜ್ಯಪಾಲ

1 min read

ಕೋಲ್ಕತ್ತಾ,ಜ.16-ನನ್ನ ಒಪ್ಪಿಗೆಯಿಲ್ಲದೆ ಈವರೆಗೆ ರಾಜ್ಯದ 25 ವಿವಿಗಳಿಗೆ ಕುಲಪತಿಗಳನ್ನು ನೇಮಕಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಆರೋಪಿಸಿದ್ದಾರೆ.
ಶೈಕ್ಷಣಿಕ ವಾತಾವರಣ-ಆಡಳಿತಗಾರರ ಕಾನೂನು,ಕಾನೂನಿನ ಆಡಳಿತವಲ್ಲ. 24 (ಈಗ 25) ವಿವಿಗಳ ಕುಲಪತಿಗಳನ್ನು ಕುಲಾಧಿಪತಿಗಳ ಒಪ್ಪಿಗೆಯಿಲ್ಲದೆ ಕಾನೂನುಬಾಹಿರವಾಗಿ ನೇಮಕಗೊಳಿಸಲಾಗಿದೆ ಎಂದು ಧಂಕರ್ ಟ್ವೀಟ್ ಮಾಡಿದ್ದಾರೆ.
ಎರಡನೇ ಅವಧಿಗೆ ಕೋಲ್ಕತಾ ವಿವಿಯ ಕುಲಪತಿಗಳಾಗಿ ಪ್ರೊ.ಸೋನಾಲಿ ಚಕ್ರವರ್ತಿ ಬ್ಯಾನರ್ಜಿ ಅವರ ಮುಂದುವರಿಕೆ ಕುರಿತು ತಾನು 2021, ಆ.17ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬರೆದಿದ್ದ ಪತ್ರವನ್ನು ಧಂಕರ್ ಶೇರ್ ಮಾಡಿಕೊಂಡಿದ್ದಾರೆ.
ಸೋನಾಲಿಯವರನ್ನು ಯಾವುದೇ ಆಯ್ಕೆಯಿಲ್ಲದೆ ಎರಡನೇ ಅವಧಿಗೆ ಮುಂದುವರಿಸಲಾಗಿದೆ. ಆ.17ರ ಪತ್ರಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿಲ್ಲ. ಸೋನಾಲಿಯವರ ನೇಮಕದ ಆ.28ರ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳುವಂತೆ ಕುಲಾಧಿಪತಿಗಳು ಸೆ.16ರಂದು ನಿರ್ದೇಶ ನೀಡಿದ್ದರು. ಶಿಕ್ಷಣ ಸಚಿವ ಬೃತ್ಯ ಬಸು ಅವರು ಇದಕ್ಕೆ ಉತ್ತರಿಸಿಲ್ಲ’ ಎಂದು ಇನ್ನೊಂದು ಟ್ವಿಟರ್ ಪೋಸ್ಟ್ನಲ್ಲಿ ಅವರು ಹೇಳಿದ್ದಾರೆ.
ಕುಲಾಧಿಪತಿಯಾಗಿ ಧಂಕರ್ ಅವರು ಕುಲಪತಿಗಳಾಗಿ ನೇಮಕಗೊಳಿಸಿದ್ದ ಆರ್ಟ್ಸ್ ಫ್ಯಾಕಲ್ಟಿಯ ಡೀನ್ ಪ್ರೊಫೆಸರ್ ತಪನ್ ಮಂಡಲ್ ಅವರು ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಬಳಿಕ ಮಮತಾ ಬ್ಯಾನರ್ಜಿ ಸರಕಾರವು ಪ್ರೊ.ಸೋಮ ಬಂದೋಪಾಧ್ಯಾಯ ಅವರನ್ನು ಡೈಮಂಡ್ ಹಾರ್ಬರ್ ಮಹಿಳಾ ವಿವಿಯ ನೂತನ ಕುಲಪತಿಗಳಾಗಿ ನೇಮಕಗೊಳಿಸಿದ 24 ಗಂಟೆಗಳಲ್ಲಿ ಈ ಆರೋಪ ಹೊರಬಿದ್ದಿದೆ.
ಶೋಧ ಸಮಿತಿಯು ಆಯ್ಕೆ ಮಾಡಿದ್ದ ಕುಲಪತಿಗಳ ಹೆಸರುಗಳನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕಿತ್ತು ಮತ್ತು ಅವರು ತನ್ನ ಒಪ್ಪಿಗೆಯನ್ನು ನೀಡಲು ನಿರಾಕರಿಸಿದರೆ ಶಿಕ್ಷಣ ಇಲಾಖೆಗೆ ತನ್ನ ನಿರ್ಧಾರದೊಂದಿಗೆ ಮುಂದುವರಿಯುವ ಅಧಿಕಾರವಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಒತ್ತಿ ಹೇಳಿದೆ.

About Author

Leave a Reply

Your email address will not be published. Required fields are marked *