ನೌಕರರ ರಾಜ್ಯ ವಿಮಾ ನಿಗಮ ಸೇರಿದಂತೆ 3,847 ಹುದ್ದೆಗೆ ಅರ್ಜಿ ಅಹ್ವಾನ
1 min readಬೆಂಗಳೂರು,ಜ.21-ನೌಕರರ ರಾಜ್ಯ ವಿಮಾ ನಿಗಮ ಸೇರಿದಂತೆ 3,847 ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ.
ಅಪ್ಪರ್ ಡಿವಿಜನ್ ಕ್ಲರ್ಕ್ (ydc), ಸ್ಟೆನೋಗ್ರಾಫರ್ (ಸ್ಟೆನೋ.) ಮತ್ತು ನೌಕರರ ರಾಜ್ಯ ವಿಮಾ ನಿಗಮ ಇಲಾಖೆಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳಿ 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ತಿಂಗಳಿಗೆ 25,500 ರೂ. ನಿಂದ 81,100/- ರೂ. ಆಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನ.
ಅಭ್ಯರ್ಥಿಗಳು https://ibpsonline.ibps.in/esiccsmdec21/ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://www.esic.nic.in/attachments/recruitmentfile/7f560c11d742e7be4938d51c1a24f58e.pdf ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ.