ಯಕೃತ್ತು ಕುರಿತು ಅಪೋಲೊ ಪುನರ್ಜನ್ಮ ಕಾರ್ಯಕ್ರಮ
1 min readಮೈಸೂರು: ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು `ಪುನರ್ಜನ್ಮ’, ಯಕೃತ್ತಿನ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಖ್ಯಾತ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕ ಶ್ರೀ ಅರ್ಜುನ್ ಜನ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಭಾರತೀಶ ರೆಡ್ಡಿ, ವೈಸ್ ಪ್ರೆಸೆಡೆಂಟ್ ಮತ್ತು ಯೂನಿಟ್ ಹೆಡ್, ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು, ಡಾ.ರಾಜ್‌ಕುಮಾರ್ ಪಿ.ವಾಧ್ವಾ, ಮುಖ್ಯ ಗ್ಯಾಸ್ಟ್ರೊಎಂಟರಾಲಜಿಸ್ಟ್ ಮತ್ತು ಮುಖ್ಯಸ್ಥರು, ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಸೈನ್ಸಸ್, ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್ ಮೈಸೂರು, ಡಾ.ಸುರೇಶ್ ರಾಘವಯ್ಯ, ಸೀನಿಯರ್ ಕನ್ಸಲ್ಟಂಟ್ ಎಚ್‌ಪಿಬಿ ಮತ್ತು ಬಹುಅಂಗಾಂಗ ಕಸಿ ಸರ್ಜನ್, ಅಪೋಲೊ ಹಾಸ್ಪಿಟಲ್ ಬೆಂಗಳೂರು, ಡಾ.ನೈರುಥ್ಯ ಎಸ್., ಮುಖ್ಯ ಗ್ಯಾಸ್ಟ್ರಿಯೊಇಂಟೆಸ್ಟಿನಲ್ ಸರ್ಜನ್, : ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್ ಮೈಸೂರು, ಡಾ.ಯಶವಂತ ಕುಮಾರ್ ವಿ., ಕನ್ಸಲ್ಟಂಟ್, ಹೆಪಟೊಬಿಲಿಯರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್, : ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್ ಮೈಸೂರು ಮತ್ತು ಡಾ.ಆರ್ತಿ ಬೆಹ್ಲ್, ಕನ್ಸಲ್ಟೆಂಟ್ ಸೈಕಿಯಾಟ್ರಸ್ಟ್, ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಅರ್ಜುನ್ ಜನ್ಯ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅರ್ಜುನ ಜನ್ಯ ಅವರು ವೈದ್ಯರ ಸಲಹೆಗಳನ್ನು ಪಾಲಿಸುವಂತೆ ಕರೆ ನೀಡಿದರು. ಸಮಾಜದಲ್ಲಿ ಇಂತಹ ಅರಿವಿನ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು. ಅಪೋಲೊ ಮೈಸೂರು ಆಸ್ಪತ್ರೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವಾ ಕಾರ್ಯವನ್ನು ಅರ್ಜುನ ಜನ್ಯ ಶ್ಲಾಘಿಸಿದರು. ಹೆಚ್ಚು ಜೀವಗಳನ್ನು ಉಳಿಸಿ, ಅಂಗಾಂಗ ದಾನಕ್ಕೆ ಕಾಯುತ್ತಿರುವ ರೋಗಿಗಳ ಬದುಕಿನಲ್ಲಿ ಬದಲಾವಣೆ ತರಲು ಅಂಗಾಂಗ ದಾನಕ್ಕೆ ಸಹಿ ಹಾಕುವಂತೆ ಅವರು ಸಭಿಕರನ್ನು ಹುರಿದುಂಬಿಸಿದರು. ಅಂಗಾಂಗಗಳ ದಾನಕ್ಕೆ ಸಹಿ ಮಾಡಿ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಲು ಜನರು ಮುಂದಾಗಿ ಮಾನವೀಯತೆಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ಶ್ರೀ ಭಾರತೀಶ ರೆಡ್ಡಿ ಅವರು ಅವರು ಆರೋಗ್ಯದಲ್ಲಿ ಗಣನೀಯ ಸುಧಾರಣೆಗಾಗಿ ಜನರಿಗೆ ಯಕೃತ್ತಿನ ಕಾಯಿಲೆಗಳ ಕುರಿತು ಅರಿವು ಮೂಡಿಸಬೇಕಾದ ಅಗತ್ಯ ಮತ್ತು ಮಹತ್ವದ ಕುರಿತು ವಿವರಿಸಿದರು. ದೀರ್ಘಕಾಲದಿಂದ ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿರುವವರ ಬದುಕಿನಲ್ಲಿ ಅಪೋಲೊ ಆಸ್ಪತ್ರೆ ಯಕೃತ್ತನ ಕಸಿ ಮೂಲಕ ಯಾವ ರೀತಿಯ ಬದಲಾವಣೆ ತಂದಿದೆ ಮತ್ತು ಹೇಗೆ ಅವರ ಬದುಕಿನಲ್ಲಿ ಭರವಸೆ ಹಾಗೂ ಎರಡನೇ ಅವಕಾಶ ನೀಡಿದೆ ಎನ್ನುವುದನ್ನು ಅವರು ವಿವರಿಸಿದರು. ಅಪೋಲೊ ಮೈಸೂರು ಕಳೆದ ಕೆಲವು ವರ್ಷಗಳಲ್ಲಿ ಯಕೃತ್ ಕಾಯಿಲೆಯ ಕೊನೆಯ ಹಂತ ತಲುಪಿ ಬಳಲುತ್ತಿದ್ದ ೫೦ಕ್ಕೂ ಅಧಿಕ ಜನರಿಗೆ ಯಕೃತ್ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಿದೆ ಅವರ ಬದುಕಿನಲ್ಲಿ ಪರಿವರ್ತನೆ ತಂದಿದೆ ಎನ್ನುವ ಮಾಹಿತಿ ನೀಡಿದರು.
ಡಾ.ರಾಜ್‌ಕುಮಾರ್ ಪಿ.ವಾಧ್ವಾ ಅವರು, ಜನರು ಮದ್ಯಪಾನ ನಿಯಂತ್ರಣದಲ್ಲಿಟ್ಟುಕೊಂಡು, ಧೂಮಪಾನ ಕಡಿಮೆ ಮಾಡಿ, ಆರೋಗ್ಯಕರ ದೇಹತೂಕವನ್ನು ಕಾಪಾಡಿಕೊಳ್ಳುವ ಮೂಲಕ ರೋಗಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರಲ್ಲದೆ, ಬಹುಮುಖ್ಯ ಅಂಗವಾದ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ಸ್ವಯಂ ವೈದ್ಯದಿಂದ ದೂರ ಇರಬೇಕು ಎಂದು ಸಲಹೆ ನೀಡಿದರು. ಯಕೃತ್ ವಿಫಲವಾದರೆ ವ್ಯಕ್ತಿ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಅವರು ವಿವರಿಸಿದರು. ಗಂಭೀರ ಮತ್ತು ದೀರ್ಘಕಾಲದಿಂದ ಯಕೃತ್ ಆರೋಗ್ಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವರು ಮಹತ್ವಪೂರ್ಣ ಸಲಹೆಗಳನ್ನು ನೀಡಿದರು.
ಡಾ.ಸುರೇಶ್ ರಾಘವಯ್ಯ ಅವರು ಅಂಗಾಂಗ ದಾನದ ಕುರಿತು ವಿವರಿಸಿದರಲ್ಲದೆ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಪ್ರಕರಣಗಳ ಕೇಸ್ ಸ್ಟಡಿಯನ್ನು ಪ್ರಸ್ತುತಪಡಿಸಿದರು. ಅಂಗಾಂಗ ದಾನದಿಂದಾಗಿ ಅಂಗಾಂಗ ಕಸಿಗೆ ಒಳಗಾದ ವ್ಯಕ್ತಿಯು ಹೇಗೆ ಆರೋಗ್ಯಕರ ಜೀವನ ನಡೆಸಬಹುದು ಎನ್ನುವ ಮಾಹಿತಿಯನ್ನು ನೀಡಿದರು.
ಡಾ.ನೈಋಥ್ಯ ಎಸ್. ಮತ್ತು ಡಾ.ಯಶವಂತ ಕುಮಾರ್ ವಿ. ಅವರು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಕುರಿತು ವಿವರಿಸಿದರಲ್ಲದೆ, ಸಮತೋಲಿತ ಬದುಕು ಸಾಗಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು. ಡಾ.ಆರ್ತಿ ಬೆಹ್ಲ್ ಅವರು ಮದ್ಯಪಾನ ಚಟಕಕ್ಕೆ ದಾಸರಾಗುವವರು ಮತ್ತು ಗಂಭೀರ ಹಾಗೂ ದೀರ್ಘಕಾಲದಿಂದ ಯಕೃತ್ ಕಾಯಿಲೆಗೆ ತುತ್ತಾಗಿರುವವರ ಮಾನಸಿಕ ಸವಾಲುಗಳು ಮತ್ತು ಅದರಿಂದ ಹೊರಬರುವ ಮಾರ್ಗೋಪಾಯದ ಕುರಿತು ವಿವರಿಸಿದರು.
ಅಂಗಾಂಗ ಕಸಿ ಮಾಡಿಸಿಕೊಂಡವರು ತಮ್ಮ ಅಂಗಾಂಗ ಕಸಿಯ ಅನುಭವ ಹಂಚಿಕೊಂಡರಲ್ಲದೆ ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ಘಿ, ಮೈಸೂರು ಇದರ ತಜ್ಞ ವೈದ್ಯರಿಗೆ ಧನ್ಯವಾದ ಸಲ್ಲಿಸಿದರು. ಜತೆಗೆ, ಯಕೃತ್ ಕಾಯಿಲೆಯ ಅಂತಿಮ ಹಂತದಲ್ಲಿರುವವರು ಯಾವ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಮತ್ತು ಹೊಸ ಬದುಕಿನ ಅವಕಾಶಕ್ಕಾಗಿ ತಕ್ಷಣವೇ ತಜ್ಞರನ್ನು ಸಂಪರ್ಕಿಸಬೇಕು, ಸಕಾಲದಲ್ಲಿ ತಜ್ಞರನ್ನು ಸಂಪರ್ಕಿಸಿದರೆ ಜೀವಕ್ಕೆ ಅಪಾಯ ತಂದೊಡ್ಡುವ ಯಕೃತ್ ಕಾಯಿಲೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಬಹುದು ಎನ್ನುವ ಸ್ಪಷ್ಟ ಸಂದೇಶ ರವಾನಿಸಿದರು. ಶ್ರೇಷ್ಠ ದಾನಕ್ಕಾಗಿ ದಾನಿಗಳ ಕುಟುಂಬ, ಅವರ ಸಂಬಂಗಳಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಯಕೃತ್ ಕಸಿಯ ಪಯಣದಲ್ಲಿ ಉತ್ತಮ ಬೆಂಬಲ ನೀಡಿದ ಅಪೋಲೊ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.
ಅಪೋಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ಶ್ರೀ ಅರ್ಜುನ್ ಜನ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದೆ ಮತ್ತು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮೊಂದಿಗೆ ಸಂವಾದ ನಡೆಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತದೆ. ಶ್ರೀ ಅರ್ಜುನ್ ಜನ್ಯ ಅವರು ಸಂಗೀತ ಮತ್ತು ತಮ್ಮ ಹಾಡುಗಳ ಮೂಲಕ ಅಂಗಾಂಗ ದಾನ ಮತ್ತು ಯಕೃತ್ ಅನ್ನು ಆರೋಗ್ಯಕವಾಗಿ ಇರಿಸಿಕೊಳ್ಳುವುದರ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ಅಪೋಲೊ ಮತ್ತು ವೈದ್ಯಕೀಯ ತಂಡದ ಮನವಿಯಾಗಿದೆ.