ಸಿದ್ದರಾಮಯ್ಯ ವಿರುದ್ಧ ಆರೋಪ: ಹೆಚ್.ವಿಶ್ವನಾಥ್ ಗೆ ತಿರುಗೇಟು ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ
1 min readಮೈಸೂರು,ಫೆ.2-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ರಾಜಕೀಯಕ್ಕಾಗಿ ಅರೋಪ ಮಾಡುತ್ತಾರೆ. ಅದರದಲ್ಲಿ ಯಾವುದೇ ಉರುಳಿಲ್ಲ. ಅವರದೇ ಪಕ್ಷದಲ್ಲಿ ಅವರಿಗೆ ಯಾವುದೇ ಮಾನ್ಯತೆ ಇಲ್ಲ. ಅದಕ್ಕಾಗಿ ಬೇರೆ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಕೃತಜ್ಞತೆ ಇಲ್ಲದೇ ಯಾವಾಗ ನಡೆದುಕೊಂಡಿದ್ದಾರೆ. ಸಿಎಂ ಇಬ್ರಾಂ ಅವರು ಬಿಟ್ಟೋದ ಹಿನ್ನೆಲೆಯಲ್ಲಿ ಇವನ್ನೆಲ್ಲಾ ಹೇಳಿದ್ದಾರೆ. ಅವರು ಬಂದ ಮೇಲೆ ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟಿ ಎಂಎಲ್ಸಿ ಮಾಡಿದ್ದೆವು. ಆದರೆ ಈಗ ಅವರಿಗೆ ಯಾವುದೇ ಅಧಿಕಾರಿ ಇಲ್ಲ ಅಂತ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಪಕ್ಷದ ಯಾವ ತಪ್ಪು ಇಲ್ಲ. ಪಕ್ಷ ಅವರಿಗೆ ಸೂಕ್ತ ಸ್ಥಾನಮಾನ ನೀಡಿತ್ತು ಎಂದಿದ್ದಾರೆ.
ಚುನಾವಣೆ ಹತ್ತಿರ ಬರಲಿ ಬಿಜೆಪಿಯಿಂದ ಎಷ್ಟು ಜನ ವಾಪಸ್ ಬರ್ತಾರೆ ಅಂತ ಗೊತ್ತಾಗುತ್ತೆ. ನಾವು ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿ ಮಾಡಲ್ಲ. ಬಿಜೆಪಿ ರೀತಿ ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ. ಆ ರೀತಿ ಮಾಡಬೇಕು ಅಂದ್ರೆ ಕೋಟಿ ಕೊಟ್ಟು ಖರೀದಿ ಮಾಡಬೇಕು. ಚುನಾವಣೆ ಹತ್ತಿರ ಬಂದಾಗ ಅವರೇ ನಮ್ಮ ಬಳಿ ಬರ್ತಾರೆ ಎಂದಿದ್ದಾರೆ.