ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಶ್ರೀ ಆದಿಶಕ್ತಿ ಬನ್ನಿಮರದಮ್ಮ ಹಬ್ಬದ ಸಂಭ್ರಮ

1 min read

ಮೈಸೂರು: ಮೈಸೂರಿಮ ಕುಂಬಾರ ಕೊಪ್ಪಲ್‌ನಲ್ಲಿ ಇಂದು ಬನ್ನಿಮರದಮ್ಮನವರ 201ನೇ ವರ್ಷದ ಮಹೋತ್ಸವನ್ನ ನೆರವೇರಿಸಲಾಯಿತು. ಈ ಹಬ್ಬ ಕುಂಬಾರ ಕೊಪ್ಪಲ್ಲಿನ ಇತಿಹಾಸವನ್ನು ನೆನಪಿಸಿದ್ದು, ಗ್ರಾಮೀಣ ಭಾಗದ ಸೊಬಗು ಈ ಗ್ರಾಮ ದೇವತೆಗಳ ಹಬ್ಬ, ಗ್ರಾಮ ದೇವತೆಗಳು ಹೇಗೆ ಸೃಷ್ಟಿಯಾದವು ಎಂಬುವುದಕ್ಕೆ ಈ ದೇಗುಲ ಸಾಕ್ಷಿಯಾಗಿದೆ.

ಆಗಿನ ಕಾಲಘಟ್ಟದಲ್ಲಿ ಭಕ್ತಿ ಶ್ರದ್ದೆಗಳು ಎಂಬುವುದು ಅವರುಗಳ ನಂಬಿಕೆಗಳ ಆಧಾರದ ಮೇಲೆ ನೆಲೆನಿಂತಿತ್ತು. ಗ್ರಾಮ ರಕ್ಷಣೆಗಾಗಿ ಗ್ರಾಮದ ಹೆಬ್ಬಾಗಿಲಿನಲ್ಲಿ ನೆಲೆನಿಂತ ಈ ಬನ್ನಿಮರದಮ್ಮ ತಾಯಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಕುಂಬಾರ ಕೊಪ್ಪಲಿನವರಲ್ಲದೆ ಸುತ್ತಲಿನ ಹತ್ತಾರು ಗ್ರಾಮದ ಜನತೆ ಪೂಜಿಸುತ್ತಾರೆ.

ಇನ್ನು ಈ ಗ್ರಾಮದೇವತೆ ಪೂಜೆಯಲ್ಲಿ ಕುಂಬಾರ ಕೊಪ್ಪಲಿನ ಯಜಮಾನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಮಾದೇಗೌಡರು. ವಿಧ್ಯಾವರ್ದಕ ಸಂಘದ ಅಧ್ಯಕ್ಷರಾದ ಗುಂಡಪ್ಪ ಗೌಡರು. ಮಾಜಿ ಪಾಲಿಕೆ ಸದಸ್ಯರಾದ ಜಯರಾಮ್ . ಅಭ್ಯುದಯ ಸಂಘದ ಅಧ್ಯಕ್ಷರಾದ ಕೆ ಟಿ.ಚಲುವೇಗೌಡರು ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಮಹೋತ್ಸವವನ್ನು ನೆರವೇರಿಸಿದರು.

About Author

Leave a Reply

Your email address will not be published. Required fields are marked *