September 9, 2024

ಮೈಸೂರಿನ ನಾಗರೀಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ನಟ ಅನಿರುಧ್ ಮನವಿ..!

1 min read

ಮೈಸೂರು: ಪ್ರತಿ ದಿನ ಕೊರೋನಾ ಪ್ರಕರಣಗಳು ಹೆಚ್ಚಾದಂತೆ ಜನರಿಗೆ ಅರಿವು ಮೂಡಿಸುವ ಕೆಲಸವು ಭರದಿಂದ ಸಾಗಿದೆ. ಈ ನಡುವೆ ನಟ ಅನಿರುಧ್ ಕೂಡ ಮೈಸೂರಿನ ನಾಗರೀಕರಿಗೆ ಸಂದೇಶ ಕೊಟ್ಟಿದ್ದು ಆ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಮೈಸೂರಿನ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕರೋನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದು, ನಾನು ಕೂಡ‌ ಲಸಿಕೆ ಪಡೆದಿರುವುದಾಗಿ ಹೇಳಿದ್ದಾರೆ. ನಿಮ್ಮ ಮೈಸೂರಿನ ಹತ್ತಿರದ ಕೇಂದ್ರಗಳಿಗೆ ತೆರಳಿ ಅಲ್ಲಿ ಲಸಿಕೆ ಪಡೆಯಿರಿ’ ಕರೋನಾದಿಂದ ಮುಕ್ತರಾಗೋಣ ಎಂದು ಸಂದೇಶ ಕೊಟ್ಟಿದ್ದಾರೆ.

https://www.facebook.com/NannuruMysuru/videos/490668705413124

ಈಗಾಗಲೇ ಒಳ್ಳೆಯ ಕೆಲಸದಿಂದ ಸಾಕಷ್ಟು ಜನರ ಮನೆ ಮಾತಾಗಿರುವ ಅನಿರುಧ್ ಅವರು ಜನರಿಗೆ ಈ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ಅಲ್ಲದೆ ಅನಿರುಧ್ ಮಾತಿನಂತೆ ಈಗಾಗಲೇ ಮೈಸೂರು ರಾಜ್ಯದಲ್ಲೇ ಅತೀ ಹೆಚ್ಚು ಲಸಿಕೆಯನ್ನ 45 ವರ್ಷ ಮೇಲ್ಪಟ್ಟ ಜನರಿಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ‌. ಈ ಸಂದೇಶ ಕೂಡ ಮತ್ತಷ್ಟು ಎಫೆಕ್ಟಿವ್ ಆಗಲಿದ್ದು, ಮೈಸೂರು ಮತ್ತೇ ಕರೋನಾದಿಂದ ಮುಕ್ತವಾಗಿ ಹೊರಬರಲಿ ಅನ್ನೋದು ಕೂಡ ನಮ್ಮ ಪ್ರಾರ್ಥನೆ.

About Author

Leave a Reply

Your email address will not be published. Required fields are marked *