September 9, 2024

ನಂಜನಗೂಡು ಪೊಲೀಸರ ಕಾರ್ಯಾಚರಣೆ: ಇಬ್ಬರು ಬೈಕ್ ಕಳ್ಳರ ಬಂಧನ

1 min read

ಮೈಸೂರು: ನಂಜನಗೂಡು ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 390000 ರೂ ಮೌಲ್ಯದ 8 ದ್ವಿಚಕ್ರ ವಾಹನಗಳ ವಶಪಡಿಸಿಕೊಳ್ಳಲಾಗಿದೆ.

ನಂಜನಗೂಡು ಮೈಸೂರು ಮುಖ್ಯರಸ್ತೆಯ ಕತ್ವಾಡಿಪುರ ಗೇಟ್ ಬಳಿ ಬೈಕ್ ಕಳ್ಳರ ಬಂಧನವಾಗಿದೆ. ನಂಜನಗೂಡಿನ ನೀಲಕಂಠನಗರದ ಶಿವಪ್ರಸಾದ್ ನಂಜನಗೂಡು ಹಾಗೂ ತ್ಯಾಗರಾಜ ಕಾಲೋನಿಯ ಶಶಾಂಕ ಬಂಧಿತ ಆರೋಪಿಗಳು.

ಮೈಸೂರು ಕಡೆಯಿಂದ ನಂಜನಗೂಡು ಕಡೆಗೆ ನಂಬರ್ ಪ್ಲೇಟ್ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಸ್ಕೂಟರ್ನಲ್ಲಿ ಕಳ್ಳರು ತೆರಳುತ್ತಿದ್ದು, ಕತ್ವಾಡಿಪುರ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ವಾಹನ ಕಳ್ಳರು ಸಿಕ್ಕಿಬಿದ್ದಿದ್ದಾರೆ. ತಪಾಸಣೆ ವೇಳೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಕಳ್ಳತನ ಬೆಳಕಿಗೆ ಬಂದಿದೆ.

ಪೊಲೀಸ್ ಇನ್ಸ್ಪೆಕ್ಟರ್ ಶಿವನಂಜೆ ಶೆಟ್ಟಿ, ಎಸ್ಐ ಚಂದ್ರ ಮತ್ತು ಪಿಎಸ್ಐ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಈ ಹಿಂದೆಯೂ ಕಳ್ಳತನ ಮಾಡಿರುವ ಚಾಲಾಕಿಗಳು:

ಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಮೋಟಾರ್ಸೈಕಲ್, ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ 1 ಬಜಾಜ್ ಪಲ್ಸರ್, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ 1 ಯಮಹ ಮೋಟರ್ ಸೈಕಲ್, ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯಲ್ಲಿ 1 ಮೋಟಾರ್ಸೈಕಲ್, ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಮೋಟಾರ್ಸೈಕಲ್, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಮೋಟರ್ಸೈಕಲ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಮೋಟಾರ್ಸೈಕಲ್ ಎಗರಿಸಿರುವ ಆಸಾಮಿಗಳು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನಂಜನಗೂಡು ಉಪ ಕಾರಾಗೃಹದಲ್ಲಿ ಇದ್ದಾರೆ.

About Author

Leave a Reply

Your email address will not be published. Required fields are marked *