ಮಕ್ಕಳಿರುವಲ್ಲಿಯೇ ಆಧಾರ ಅಪ್ಡೇಟ್!
1 min readಮೈಸೂರು : ಮಕ್ಕಳಲ್ಲಿ ಕೊರೊನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಆಧಾರ್ ಸೇವಾ ಕೇಂದ್ರದವರೇ ಭೇಟಿ ಕೊಟ್ಟು ದಾಖಲೆ ಅಪ್ಡೇಟ್ ಮಾಡುವ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳು ಇರುವಲ್ಲಿಯೇ ಮೈಸೂರಿನ ಆಧಾರ್ ಸೇವಾ ಸಿಬ್ಬಂದಿಗಳು ತೆರಳಿ ಆಧಾರ್ ಅಪ್ಡೇಟ್ ಮಾಡುತ್ತಿದ್ದಾರೆ.
ಇಂದು ಮೈಸೂರು ತಾಲ್ಲೂಕಿನ ಮಾರ್ಬಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಿಬ್ಬಂದಿಗಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಧಾರ್ ಸೇವೆ ಅಪ್ಡೇಟ್ ಮಾಡುತ್ತಿದ್ದಾರೆ. ಮೈಸೂರು ನಗರದಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಶಾಲೆಗಳಿಗೆ ಭೇಟಿ ನೀಡಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ಸೇವಾ ಸಿಬ್ಬಂದಿಗಳು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ತೆರಳಿ ಈ ಸೇವೆ ನೀಡುತ್ತಿದ್ದಾರೆ.