ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆ

1 min read

ಮೈಸೂರು: ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನವನ್ನು ರಕ್ತ ನೀಡಿ, ಪ್ಲಾಸ್ಮ ನೀಡಿ ಆಚರಿಸಲಾಯಿತು.

ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ರಕ್ತ ಕೇಂದ್ರ ವಿಭಾಗ, ಪ್ಯಾಥಾಲಜಿ ವಿಭಾಗ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಮತ್ತು ಎನ್‌ಎಸ್‌ಎಸ್ ಘಟಕ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್‌ನ ಇವರ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು “ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳಿ” ಎಂಬ ಧ್ಯೇಯವಾಕ್ಯದೊಂದಿಗೆ ದಿನಾಂಕ ೧೪.೦೬.೨೦೨೩ ರಂದು ಬೆಳಗ್ಗೆ ೧೦.೩೦ ರಂದು ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಂಭಾಗಣದಲ್ಲಿ ಆಚರಿಸಲಾಯಿತು.

ಜೆಎಸ್‌ಎಸ್ ಆಸ್ಪತ್ರೆಯ ರಕ್ತ ಕೇಂದ್ರ ಅಧಿಕಾರಿಯಾದ ಡಾ. ಪಲ್ಲವಿ. ಪಿ. ರವರು ಕಾರ್ಯಕ್ರಮದ ಮಹತ್ವವನ್ನು ಹಾಜರಿದ್ದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸುರಕ್ಷಿತ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಡಾ. ರಾಜೇಂದ್ರ. ಕೆ. ವಿ, ಐ.ಎ.ಎಸ್, ಜಿಲ್ಲಾಧಿಕಾರಿಗಳು, ಮೈಸೂರು ಇವರು ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಕ್ಕೊಳಗಾದವರಿಗೆ ಮತ್ತು ರಕ್ತದ ಅವಶ್ಯಕತೆಯಿರುವ ರೋಗಿಗಳಿಗೆ ರಕ್ತದ ಕೊರತೆಯು ಹೆಚ್ಚಾಗುತ್ತಲೇ ಇದ್ದು ಇದನ್ನು ಸರಿದೂಗಿಸಲು ಯುವ ಸಮೂಹವು ನಿರಂತರವಾಗಿ ರಕ್ತದಾನ ಮಾಡುವಂತೆ ತಿಳಿಸಿದರು ಮತ್ತು ತಾವು ಕೂಡ ರಕ್ತದಾನ ಮಾಡುವ ಮುಖಾಂತರ ಇತರರಿಗೆ ರಕ್ತದಾನ ಮಾಡಲು ಪ್ರೇರೇಪಿಸಿದರು ಹಾಗೂ ಈ ದಿನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವ ಎಲ್ಲಾರಿಗೂ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸಿ.ಜಿ. ಬೆಟಸೂರಮಠ, ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು ಇವರು ಮಾತನಾಡಿ ರಕ್ತದಾನದ ಮಹತ್ವ ಮತ್ತು ಮೌಲ್ಯವನ್ನು ವಿವರಿಸುತ್ತಾ ನಿರಂತರವಾಗಿ ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಆರೋಗ್ಯಕ್ಕೆ ಸಂಬAಧಿಸಿದ ಲಾಭಗಳ ಕುರಿತು ಜಾಗೃತಿ ಮೂಡಿಸಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹವು ನಿರಂತರವಾಗಿ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.

ನಿರಂತರವಾಗಿ ರಕ್ತದಾನ ಮಾಡಿರುವ ಡಾ.ಅನುಪಮಾ ಸುಂದರ್ ಮತ್ತು ಡಾ.ಯುವರಾಜ್ ನಾಥ್ ಹಾಗೂ ಶ್ರೀ ನವೀನ್ ಕೆ ಇವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿಲಾಯಿತು. ಇದೇ ಸಂಧರ್ಭದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರೋಗಿಗಳಿಗೆ ನೆರವಾಗುತ್ತಿರುವ ಸಂಘ ಸಂಸ್ಥೆಗಳ ಸದಸ್ಯರಿಗೆ ಸನ್ಮಾನಿಸಿಲಾಯಿತು.

ವಿಶ್ವ ರಕ್ತದಾನಿಗಳ ದಿನಾಚರಣೆಯಂದು ಸ್ವಯಂ ಪ್ರೇರಿತರಾಗಿ ೯೦ ದಾನಿಗಳು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಉಪನಿರ್ದೇಶಕರಾದ ಡಾ. ಮಂಜುನಾಥ್, ಶ್ರೀ ಲೋಕೇಶ್, ಆಡಳಿತಾಧಿಕಾರಿಗಳು, ಜೆಎಸ್‌ಎಸ್ ಆಸ್ಪತ್ರೆ, ಡಾ. ಶೀಲಾದೇವಿ ಸಿ ಎಸ್, ಮುಖ್ಯಸ್ಥರು, ಪ್ಯಾಥಾಲಜಿ ವಿಭಾಗ, ಜೆಎಸ್‌ಎಸ್ ಆಸ್ಪತ್ರೆ, ಶ್ರೀಮತಿ ಅಶ್ವಥಿ ದೇವಿ ಎಂ.ಕೆ ಪ್ರಾಂಶುಪಾಲರು, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಸಿಬ್ಬಂದಿಗಳು ಮತ್ತು ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *