ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಶಿಫ್ಟ್!

1 min read

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬದಲಾಗಿದೆ. ಮೈಸೂರಿನ ಮಹಾರಾಣಿ ಕಾಲೇಜು ಬಳಿ ಇರುವ ಪುರಾತನ ಕಚೇರಿಯನ್ನ ಸಿದಾರ್ಥನಗರದ ಹಾಲಿನ ಡೈರಿ ಸಮೀಪ ಇರುವ ನೂತನ ಜಿಲ್ಲಾಡಳಿತದ ಕಚೇರಿಗೆ ವರ್ಗಾಯಿಸಲಾಗಿದೆ. ಇಂದಿನಿಂದಲೇ ಹೊಸ ಕಚೇರಿ ಶಿಫ್ಟ್ ಆಗಿದ್ದು ಕಾರ್ಯಾರಂಭ ಮಾಡಿದೆ. ಇದನ್ನ ಅಧಿಕೃತವಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದು ಈ ಕೆಳಕಂಡಂತೆ ಇದೆ.

ಜಿಲ್ಲಾಧಿಕಾರಿಗಳು, ಮೈಸೂರು, ಜಿಲ್ಲೆ ಇವರು ದಿನಾಂಕ 8-6-2023ರಿಂದ ಸಿದ್ದಾರ್ಧ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಹೊಸಕಟ್ಟಡದಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳನ್ನು ಸಾರ್ವಜನಿಕರು ಸಿದ್ದಾರ್ಧನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳಾದ ಡಾ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *