ಕರ್ನಾಟಕದ 7 ಅದ್ಭುತ : ಮೈಸೂರಿನ ಯಾವ ಸ್ಥಳ ಈ ಸಾಲಿನಲ್ಲಿ ಸೇರಿಸಲು ನಿಮಗೆ ಇಷ್ಟ?

1 min read

ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಮೈಸೂರಿನ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.

ಮೈಸೂರು ಜಿಲ್ಲೆಯ ಆರು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಆರು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.

ಇಂಡೋ ಸಾರ್ಸನಿಕ್ ಶೈಲಿಯ ಭಾರತದ ಅತಿ ಸುಂದರ ಅರಮನೆಗಳಲ್ಲೊಂದು, ದಸರೆಯ ಕೇಂದ್ರಬಿಂದುವಾಗಿರುವ ಮೈಸೂರು ಅರಮನೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನಲ್ಲಿರುವ ಹೊಯ್ಸಳ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ದೇವಾಲಯ ಟಿ ನರಸೀಪುರದ ಸೋಮನಾಥಪುರ ಕೇಶವ ದೇವಾಲಯ.

ಏಷ್ಯಾದ ೨೫ ಉನ್ನತ ದರ್ಜೆಯ ಮೃಗಾಲಯಗಳ ಪೈಕಿ ಏಳನೇ ಸ್ಥಾನದಲ್ಲಿರುವ ೧೬೦೦ಕ್ಕೂ ಅಧಿಕ ಪ್ರಾಣಿ ಪಕ್ಷಿಗಳಿರುವ ಮೃಗಾಲಯ ಚಾಮರಾಜೇಂದ್ರ ಮೃಗಾಲಯ . ಕರ್ನಾಟಕದ ಮರಳುಗಾಡು ಎಂದೇ ಖ್ಯಾತವಾಗಿರುವ ಮರಳಿನಲ್ಲಿ ಮುಳುಗಿದ್ದ ದೇವಾಲಯಗಳಿರುವ ತಾಣ . ನೈಸರ್ಗಿಕವಾಗಿಯೂ ಸುಂದರವಾಗಿರುವ ತಲಕಾಡು. ವಿಶ್ವ ಮಾನ್ಯತೆ ಇರುವ ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಅರಣ್ಯ ನಾಗರಹೊಳೆ ಅಭಯಾರಣ್ಯ. ೧೭೫ ಅಡಿ ಎತ್ತರದ ಅವಳಿ ಗೋಪುರ, ಭಾರತದ ಚರ್ಚ್ ಗಳಲ್ಲೇ ಅತಿ ಹೆಚ್ಚು ಎತ್ತರದ್ದು ಮೈಸೂರಿನ ಅಶೋಕ ರಸ್ತೆಯಲ್ಲಿರುವ ಸಂತ ಫಿಲೋಮಿನಾ ಚರ್ಚ್‌.

ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ. ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು, ಹೀಗಾಗಿ ಮೈಸೂರು ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.

About Author

Leave a Reply

Your email address will not be published. Required fields are marked *