ಕಪಿಲಾ ಪ್ರವಾಹ ಹಿನ್ನಲೆ’ ಗ್ರಾಮ ಮುಳುಗುವ ಭೀತಿ!
1 min readಕಪಿಲಾ ನದಿಗೆ ಇನ್ನೂ ನಾಲ್ಕರಿಂದ ಐದು ಅಡಿ ನೀರು ಜಾಸ್ತಿ ಆದರೆ ವರುಣ ಕ್ಷೇತ್ರದ ಹೆಜ್ಜಿಗೆ ಹಳೆ ಬೊಕ್ಕಹಳ್ಳಿ ಸೇರಿದಂತೆ ಮುಂತಾದ ಗ್ರಾಮಗಳು ಮುಳುಗುವ ಭೀತಿಯಲ್ಲಿ ಗ್ರಾಮಸ್ಥರು
ತಾಂಡವಪುರ ಆಗಸ್ಟ್ 9 ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಕೇರಳದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಇದರಿಂದ ಕಬಿನಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣ ಕಪಿಲಾ ನದಿಗೆ ಹೆಚ್ಚು ನೀರು ಬಿಡಲಾಗಿದೆ. ಇನ್ನು ನಾಲ್ಕರಿಂದ ಐದು ಅಡಿಗಳಷ್ಟು ನೀರನ್ನು ಹೆಚ್ಚು ಮಾಡಿದರೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ಕ್ಷೇತ್ರ ಕ್ಷೇತ್ರ ಹೆಜ್ಜಿಗೆ ಹೊರಮಾವು ಹಳೆ ಬೊಕ್ಕಹಳ್ಳಿ ಸೇರಿದಂತೆ ಕಪಿಲ ನದಿ ದಡದಲ್ಲಿರುವ ಗ್ರಾಮಗಳು ಮುಳುಗಲಿವೆ ಎಂದು ಬೊಕ್ಕಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಸುಂದರ ಶಿವಣ್ಣ ಅಜ್ಜಿಗೆ ಗ್ರಾಮದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣರವರು ಆತಂಕ ವ್ಯಕ್ತಪಡಿಸಿದರು.
ಅವರು ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತ ಈಗಾಗಲೇ ಕಪಿಲಾ ನದಿ ಯು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರಸಿದ್ದ ಗದ್ದೆಗಳೆಲ್ಲ ಜಲಾವೃತಗೊಂಡಿವೆ ಹಾಗೂ ನದಿಯ ಪಕ್ಕದಲ್ಲಿರುವ ಗ್ರಾಮಗಳಾದ ಬೊಕ್ಕಹಳ್ಳಿ ಹೆಜ್ಜೆಗೆ ಮಲ್ಲಮೂಲೆ ಮಠ ಸೇರಿದಂತೆ ಇನ್ನೂ ಅನೇಕ ಗ್ರಾಮಗಳು ಮುಳುಗುವ ಭಯದಲ್ಲಿ ದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ನೀರು ಹೆಚ್ಚಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಗ್ರಾಮಗಳಿಗೆ ಇಂದು ಭೇಟಿ ನೀಡಿಲ್ಲ ಪರಿಶೀಲನೆ ನಡೆಸಿಲ್ಲ ಇನ್ನು ಏನಾದರೂ ನಾಲ್ಕರಿಂದ ಐದು ಅಡಿಯಷ್ಟು ನೀರು ಹೆಚ್ಚಾದರೆ ಗ್ರಾಮದ ಮನದಲ್ಲಿ ಮನೆಯಲ್ಲಿ ವಾಸಮಾಡುವ ಜನರು ಬೀದಿಗೆ ಬರಬೇಕಾಗುತ್ತದೆ ಎಂದು ಹೇಳಿದ ಅವರು ಈಗಾಗಲೇ ಹಳೆ ಬೊಕ್ಕಹಳ್ಳಿ ಸಂಪೂರ್ಣ ಮುಳುಗಡೆ ಪ್ರದೇಶವಾಗಿದ್ದು ಗ್ರಾಮವನ್ನು ಸ್ಥಳಾಂತರ ಮಾಡಲು ಕ್ಷೇತ್ರ ಶಾಸಕರಾದ ಡಾಕ್ಟರ ಯತೀಂದ್ರ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇವೆ.
ಹದಿನಾರು ಗ್ರಾಮದ ಬಳಿಯಿರುವ ಬಿಳಿಕೆರೆ ಮಾದಪ್ಪನ ದೇವಸ್ಥಾನದ ಬಳಿ ಸುಮಾರು ನೂರಾರು ಎಕರೆ ಸರ್ಕಾರಿ ಭೂಮಿ ಅಲ್ಲಿ 50 ರಿಂದ 100 ಎಕರೆಯಷ್ಟು ಜಮೀನನ್ನು ನಿಮಿಷ ರವಾಗಿ ಪರಿವರ್ತಿಸಿ ನಮಗೆ ಕೊಟ್ಟರೆ ನಾವು ಈ ಗ್ರಾಮದಿಂದ ಸಂಪೂರ್ಣವಾಗಿ ಬೇರೆಡೆಗೆ ಹೋಗಿ ಪ್ರತಿಬಾರಿಯೂ ಬರುವಂತಹ ಪ್ರವಾಹ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.