30 ಸಾವಿರ ಮಕ್ಕಳಿಂದ ರ್ಯಾಲಿ’ 50 ಸಾವಿರ ಧ್ವಜ ಕಟ್ಟುವ ಗುರಿ- ಎಸ್.ಎ ರಾಮದಾಸ್!
1 min readನನಗೆ ಯಾವತ್ತು ರಾಜಕೀಯ ಬೇಡ ಅನ್ನಿಸುತ್ತೋ ಅವತ್ತು ನಾನೇ ಹಿಂದೆ ಸರಿಯುತ್ತೇನೆ. ಆದರೆ ನಾನು ಮುಂದಿನ 25 ವರ್ಷಗಳ ಕಾಲ ಒಂದು ವಿಷನ್ ಇಟ್ಟುಕೊಂಡಿದ್ದೇನೆ. ನಾನು ಅಲ್ಲಿಯವರೆಗು ಶಾಸಕನಾಗಿ ಇರ್ತಿನೋ ಇರಲ್ವೋ ಗೊತ್ತಿಲ್ಲ. ಆದರೆ ಇರುವವರೆಗು ನನ್ನ ಕೆಲಸ ಜನರಿಗೆ ತಲುಪಬೇಕು. ಹಾಗಾಗಿಯೇ ನನ್ನ ಕೆ.ಆರ್ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೇನೆಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ಕಳೆದ 87 ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಹಲವು ಮನೆಗಳಿಗೆ ಖಾತೆಯೇ ಆಗಿರಲಿಲ್ಲ. ಸ್ವತಂತ್ರದ ಸುವರ್ಣ ಮಹೋತ್ಸವದಲ್ಲಿ ನೆರವೇರಿಸುತ್ತಿದ್ದೇವೆ. 11ರಂದು ಮಹಾರಾಜರು ಬಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಅವರೇ ಅಂದು ಜನರಿಗೆ ಜಾಗ ಕೊಟ್ಟು ಖಾತೆ ಮಾಡಿಸಿಕೊಟ್ಟಿದ್ದರು. ಹಾಗಾಗಿ ಅವರೇ ಇದೀಗಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು ಅಂದೇ ಎಲ್ಲರ ಖಾತೆ ಅದಲಾತ್ನಲ್ಲಿ ಹೊಸ ಖಾತೆ ಆಗಲಿದೆ. ನಾಲ್ಕು ತಲೆಮಾರಿನಿಂದ ಮೃತಪಟ್ಟವರ ಹೆಸರಿನಲ್ಲೇ ಹಾಗೂ ಸಣ್ಣಪುಟ್ಟ ಸಮಸ್ಯೆಗೆ ಖಾತೆ ಆಗದೆ ಇರುವ ಎಲ್ಲರಿಗು ಖಾತೆ ಮಾಡಿಸಿ ಪಾಲಿಕೆ ವ್ಯಾಪ್ತಿಗೆ ಒಳಪಡುವಂತೆ ಮಾಡುತ್ತೇವೆ ಎಂದರು. ಇನ್ನು ವಿವಿಧ ವೇಷಭೂಷಣದ ಮೂಲಕ ಆ.12ರಂದು 30 ಸಾವಿರ ಮಕ್ಕಳಿಂದ ಜಾಥಾ ನಡೆಯಲಿದೆ. ರಾಷ್ಟ್ರ ಧ್ವಜ ಹಿಡಿದು, ಸ್ವಾತಂತ್ರ್ಯದ ಗೀತೆಗಳನ್ನ ಹಾಡುತ್ತ ಸಾಗುತ್ತಾರೆ. ಇದು ಮೈಸೂರಿನ ಗನ್ಹೌಸ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ಭೂತಾಳೆ ಮೈದಾನದಲ್ಲಿ ಕೊನೆಗೊಳ್ಳಲಿದೆ. ಈ ಜಾಥಾದಲ್ಲಿ 6ನೇ ತರಗತಿಯಿಂದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗುತ್ತಾರೆ. ಪೋಷಕರು ಕೂಡ ಒಮ್ಮೆ ಈ ಜಾಥಾದಲ್ಲಿ ಭಾಗಿಯಾಗಿ. ರಾಷ್ಟ್ರದ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿ ಎಂದು ಶಾಸಕ ರಾಮದಾಸ್ಮನವಿ.
50 ಸಾವಿರ ಧ್ವಜ ಕಟ್ಟುತ್ತೇವೆ!
ಆ.14ರಂದು ಯುವಕ- ಯುವತಿಯರು ಅಮೃತ ರ್ಯಾಲಿ ನಡೆಯಲಿದ್ದು ಮೈಸೂರಿನ ಅರಮನೆ ಅಂಗಳಕ್ಕೆ ಬಂದು ಸೇರುತ್ತಾರೆ. ಇದು ಯುವಕ ಯುವತಿಯರ ದಿನ. ಅವರೇ ಧ್ವಜ ಕಟ್ಟಿ ಈ ರ್ಯಾಲಿಯಲ್ಲಿ ಭಾಗಿಯಾಗುತ್ತಾರೆ. ಆ.14ರೊಳಗೆ ಕೆ.ಆರ್.ಕ್ಷೇತ್ರದಲ್ಲಿ 50 ಸಾವಿರ ರಾಷ್ಟ್ರಧ್ವಜ ಕಟ್ಟುತ್ತೇವೆ. ಆ.15ಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ತಿರಂಗದ ಹಾರಾಟ ನಡೆಯಲಿದೆ. ಯಾವುದೇ ಜಾತಿ ಧರ್ಮ ಮೀರಿ ಭಾರತಾಂಭೆಗೆ ನಮಿಸುವ ಕೆಲಸ ಆಗಲಿದೆ. ಹಾಗಾಗಿ ನಾನು ಎಲ್ಲಾ ವರ್ಗಕ್ಕು ಮನವಿ ಮಾಡಿದ್ದೇನೆ ಅಂತಾರೆ ಶಾಸಕ ಎಸ್.ಎ.ರಾಮದಾಸ್.