ಈ ಬಾರಿ ದಸರಾಗೆ ಗೋಲ್ಡ್ ಪಾಸ್ ಇಲ್ಲ..!
1 min readಮೈಸೂರು: ಈ ಬಾರಿ ದಸರಾ ಗೋಲ್ಡ್ ಪಾಸ್ ಇಲ್ಲ ಅಂತ ಸಚಿವ ಎಸ್ ಟಿ ಸೋಮಶೇಖರ್ ಅವರು ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯ ತಿಳಿಸಿದ್ದು ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾದ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ.
ಈ ಬಾರಿ ದಸರಾ ಗೋಲ್ಡ್ ಪಾಸ್ ಇಲ್ಲ. ಗೋಲ್ಡ್ ಪಾಸ್ ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾಗಿದೆ. ಆದರೆ ಜನರ ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ನಡೆಸಿದ್ದೇವೆ.
ಪಾಸ್‌ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್‌ಗಳಿಂದ ಗೋಲ್ಮಾಲ್ ಉಂಟಾಗುವ ಆರೋಪಗಳಿವೆ. ಅಂತಹ ಘಟನೆಗಳಿಗೆ ಈ ಬಾರಿ ಅವಕಾಶ ಇಲ್ಲ. ಪಾಸಿನ ವಿಸ್ತೃತವಾದ ಚರ್ಚೆ ನಡೆಯುತ್ತಿದೆ ಅಂತ ಜಿಲ್ಲಾಧಿಕಾರಿಗಳ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಶೇಖರ್ ಹೇಳಿದ್ದಾರೆ.
ಜೂನ್ ಮತ್ತು ಆಗಸ್ಟ್ ಮೈಸೂರು ಜಿಲ್ಲೆಯ ಮಳೆ ಅವಾಂತರ: 199 ಹೆಕ್ಟೇರ್ ಬೆಳೆ ನಾಶ, 221 ಹೆಕ್ಟೇರ್ ತೋಟಗಾರಿಗೆ ಬೆಳೆ ನಾಶ. ಮೈಸೂರಿನ ನಾಲ್ಕು ತಾಲೂಕು ಅತಿ ಹೆಚ್ಚು ಮನೆ ಹಾನಿ. ಒಟ್ಟು 328 ಮನೆಗಳಿಗೆ ಹಾನಿ, ಒಬ್ಬರ ಸಾವು. 2572 ಕೋಳಿಗಳ ಸಾವು ಇದು ಮಳೆಯಿಂದಾದ ಅವಾಂತರವಾಗಿದೆ ಅಂತ ಸಚಿವ ಎಸ್‌ಟಿ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 9ಕ್ಕೆ ಮೈಸೂರು ಮೇಯರ್ ಸ್ಥಾನ ಮೀಸಲಾತಿ ಪ್ರಕಟ: ಆಗಸ್ಟ್ 9ಕ್ಕೆ ಮೈಸೂರು ಮೇಯರ್ ಸ್ಥಾನದ ಮೀಸಲಾತಿ ಪ್ರಕಟ ಆಗಲಿದೆ. ಈ ಬಾರಿ ಮೈಸೂರು ಮೇಯರ್ ಯಾರಾಗಬೇಕು ಎಂಬುದನ್ನು ಮುಂದೆ ತೀರ್ಮಾನ ಆಗುತ್ತೆ ಎಂದು ತಿಳಿಸಿದರು.