ಚಾಮುಂಡಿಬೆಟ್ಟ, ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಿಎಂ ಬಳಿ ಮನವಿ ಮಾಡಿದ ಶಾಸಕ ಜಿ.ಟಿ.ಡಿ
1 min readಮೈಸೂರು: ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಶ್ರೀ ಚಾಮುಂಡಿ ಬೆಟ್ಟದಲ್ಲಿ ಆಗಮಿಸುವ ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸುವ ದೃಷ್ಠಿಯಿಂದ ಚಾಮುಂಡಿ ಬೆಟ್ಟದ ಪರಿಸರವನ್ನು ಸಂರಕ್ಷಣೆಯನ್ನು ಮಾಡುವ ಸಲುವಾಗಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವುದು ಅವಶ್ಯಕವಾಗಿರುತ್ತದೆ ಮೈಸೂರಿನ ನಿವಾಸಿಗಳ ಒತ್ತಾಸೆಯಂತೆ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಅವರು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ದಸರಾ ಮಹೋತ್ಸವ ಉನ್ನತ ಸಮಿತಿ ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಮೈಸೂರು ದಸರ ಪ್ರಾಧಿಕಾರ ರಚಿಸುವಂತೆ ಮನವಿ: ಒಂಭತ್ತು ದಿನಗಳ ವ್ರತಾಚರಣೆಯ ನಂತರ ಹತ್ತನೆ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯನ್ನು ೧೬೧೦ನ ಇಸವಿಯಲ್ಲಿ ಮೈಸೂರಿನ ಯದುವಂಶದ ೯ನೇ ಒಡೆಯರಾದ ರಾಜಾ ಒಡೆಯರ್ ಮೊದಲ ಬಾರಿಗೆ ಆರಂಭಿಸಿದರು. ಅಂದಿನಿAದ ಇಂದಿನ ವರೆಗು ಪ್ರತಿವರ್ಷವು ವೈಭವೋಪೇತವಾಗಿ ಜರುಗುವ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ನಗರವು ಸ್ವಚ್ಚವಾಗಿ ದೀಪಗಳಿಂದ ಅಲಂಕೃತಗೊAಡು ರಸ್ತೆಗಳು ತುಂಬಿ ತುಳುಕುತ್ತಿರುತ್ತವೆ.
ದಸರಾ ಮಹೋತ್ಸವ ಸಂದರ್ಭದಲ್ಲಿ ಯುವ ದಸರಾ, ಯುವ ಸಂಭ್ರಮ, ರೈತ ದಸರಾ, ದಸರಾ ಕ್ರೀಡೆ, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು ಲಲಿತಕಲೆ, ಕರಕುಶಲ ಕಲಾಪ್ರದರ್ಶನ, ಪುಸ್ತಕ ಮೇಳ, ಕವಿಗೋಷ್ಠಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುತ್ತವೆ. ಆದರೆ ಈ ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು, ಆತುರವಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಅಗತ್ಯವಾದ ಮೂಲಭೂತ ಸೌಕರ್ಯವನ್ನು ಒದಗಿಸಲು ಕಷ್ಟವಾಗುತ್ತದೆ. ಆದ್ದರಿಂದ ದಸರಾ ಮಹೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಸಲುವಾಗಿ ಮೈಸೂರಿನ ನಿವಾಸಿಗಳ ಒತ್ತಾಸೆಯಂತೆ ನಾಡಹಬ್ಬ ದಸರಾ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಅದ್ದೂರಿ ದಸರಾ ಆಚರಣೆ ಮಾಡುವಂತೆ ಮನವಿ: ಕಳೆದ ಎರಡು ವರ್ಷಗಳು ಕೋವೀಡ್ ನಿಂದಾಗಿ ಅದ್ದೂರು ದಸರಾ ಆಚರಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡುವಂತೆ ಕೋರಿದರು.
ನಗರದ ಪ್ರಮುಖ ಪಾರ್ಕ್ಗಳಲ್ಲಿ ನವರಾತ್ರಿಯ ದಿನಗಳಂದು ಸಂಗೀತ ಕಾರ್ಯಕ್ರಮಗಳನ್ನು ನಡೆಸಬೇಕು, ನಗರದ ಎಲ್ಲಾ ಬಡಾವಣೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕರಾ ಮಾಡಬೇಕು ಎಲ್ಲೆಡೆ ಹಬ್ಬದ ವಾತಾವರಣ ಇರುವಂತೆ ಮಾಡಬೇಕು ಎಂದು ತಿಳಿಸಿದರು.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸ್ತಬ್ದಚಿತ್ರ ಗಳನ್ನು ಆಯಾ ಜಿಲ್ಲೆಗಳಲ್ಲಿ ಈಗಿನಿಂದಲೇ ತಯಾರು ಮಾಡಲು ಹಾಗೂ ನೇರವಾಗಿ ದಸರಾ ಗೆ ಆಗಮಿಸುವಂತೆ ಮುಖ್ಯ ಕಾರ್ಯದರ್ಶಿಗಳ ಮೂಲಕ ನಿರ್ದೇಶನ ನೀಡುವಂತೆ ತಿಳಿಸಿದರು.
ಮೈಸೂರು ವಸ್ತು ಪ್ರದರ್ಶನವನ್ನು ದಸರಾ ಮಹೋತ್ಸವಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಪ್ರಾರಂಭಿಸಬೇಕು, ಟೂರಿಸಂ ಸರ್ಕಿಟ್‌ನ್ನು ಪ್ರಾರಂಭ ಮಾಡಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ದಸರಾ ಮಹೋತ್ಸವದ ಆಕರ್ಷಣೆಯಾದ ಯುವ ದಸರಾ, ದೀಪಾಲಂಕಾರ, ರೈತ ದಸರಾ ಕಾರ್ಯಕ್ರಮಗೊಳಡನೆ ಫಲಪುಷ್ಪ ಪ್ರದರ್ಶನವನ್ನು ಆಕರ್ಷಿಣಿಯವಾಗಿ ಮಾಡಬೇಕು ಎಂದು ತಿಳಿಸಿದರು. ಗ್ರಾಮಾಂತರ ಪ್ರದೇಶದಿಂದ ಜನರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಭೆಯಲ್ಲಿ ತಿಳಿಸಿದರು.