ಗಾಂಜಾ ಮಾರಾಟ ಮಾಡಲು ಯತ್ನಿಸಿದ ಶನೇಶ್ವರ ಸ್ವಾಮಿ ಗುಡ್ಡಪ್ಪ ಜೈಲುಪಾಲು
1 min readನಂಜನಗೂಡು: ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಶನೇಶ್ವರ ಸ್ವಾಮಿ ಗುಡ್ಡಪ್ಪ ಅಬಕಾರಿ ಪೊಲೀಸರ ಅತಿಥಿಯಾಗಿದ್ದಾನೆ.
ದೇವಸ್ಥಾನದ ಜಾಗದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಒಣಗಾಂಜಾ ವಶಪಡಿಸಿಕೊಂಡಿದ್ದಾರೆ. ಶನೇಶ್ವರಸ್ವಾಮಿ ಗುಡ್ಡಪ್ಪ ವೆಂಕಟನಾಯಕ(27) ಇದೀಗ ಪೊಲೀಸರ ಅತಿಥಿ. ನಂಜನಗೂಡು ತಾಲೂಕಿನ ನೆಲ್ಲಿತಾಳಪುರ ಗ್ರಾಮದಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಶನೇಶ್ವರ ಸ್ವಾಮಿ ದೇವಸ್ಥಾನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಸಮೇತ ಗುಡ್ಡಪ್ಪ ವೆಂಕಟನಾಯಕನನ್ನ ದಸ್ತಗಿರಿ ಮಾಡಿದ್ದಾರೆ.ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ದಿವಾನ್ ಕಾಟ್ ಕೆಳಗೆ ಬ್ಯಾಗ್ ನಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಡಲಾಗಿತ್ತು.ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿ ಇಡಲಾಗಿತ್ತೆಂದು ವಿಚಾರಣೆ ವೇಳೆ ಗುಡ್ಡಪ್ಪ ವೆಂಕಟನಾಯಕ ತಿಳಿಸಿದ್ದಾನೆ.
ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದಾಳಿ ನಡೆದಿದ್ದು 105ಗ್ರಾಂ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ವೆಂಕಟನಾಯಕ ವಿರುದ್ದ ಎಸ್.ಡಿ.ಪಿ.ಎಸ್.ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ವಿಕ್ರಂ ನಿರೀಕ್ಷಕರಾದ ದೀಪು ಎನ್ ಶಿವರಾಜು ಎಸ್ ಮತ್ತು ನಂಜನಗೂಡು ಅಬಕಾರಿ ಇಲಾಖೆ ಇತರೆ ಸಿಬ್ಬಂದಿಗಳು ಭಾಗವಹಿಸಿದರು.