ಮುಡಾ ಟೌನ್‌ ಪ್ಲಾನಿಂಗ್ ನೌಕರ ಎಸಿಬಿ ಬಲೆಗೆ!

1 min read

ಮೈಸೂರು ಮುಡಾದ ನಗರ ಯೋಜನೆ ಶಾಖಾ ಸದಸ್ಯ ಹಾಗೂ ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟೌನ್ ಪ್ಲಾನಿಂಗ್‌ನಲ್ಲಿದ್ದ ಜಿ.ಎಸ್.ಜಯಸಿಂಹ ಹಾಗೂ ಡಾಟಾ ಎಂಟ್ರಿ ಆಪರೇಟರ್(ಹೊರಗುತ್ತಿಗೆ ನೌಕರ) ಬಲೆಗೆ ಬಿದ್ದ ಭ್ರಷ್ಟನಾಗಿದ್ದಾನೆ. 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಡಾವಣೆಯೊಂದರ ಮಂಜೂರಾತಿಗಾಗಿ ಡೆವಲಪರ್ ವೇಣುಗೋಪಾಲ್ ಎಂಬುವರ ಬಳಿ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವೇಣುಗೋಪಾಲ್ ರವರು ಈ ಕುರಿತಂತೆ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ಇಂದು ತಮ್ಮ ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್ಪಿ ವಿ.ಜೆ.ಸುಜೀತ್ ನೇತೃತ್ವದಲ್ಲಿ ದಾಳಿ ನಡೆದಿದೆ.

About Author

Leave a Reply

Your email address will not be published. Required fields are marked *