ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮತಯಾಚನೆ ಮಾಡಿದ ಶಾಸಕ ಎಸ್.ಎ.ರಾಮದಾಸ್
1 min readಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಕೃಷ್ಣರಾಜ ಕ್ಷೇತ್ರದಲ್ಲಿ ನಾಲ್ಕು ದಿನದ ಮತಯಾಚನೆ ಕಾರ್ಯಕ್ರಮವು ಶಾಸಕರಾದ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಎರಡನೇ ದಿನವಾದ ಇಂದು ವಾರ್ಡ್ ನಂ 48,49,50,51,56,60 ರಲ್ಲಿ ಮತಯಾಚನೆಯನ್ನು ಮಾಡಲಾಯಿತು.
ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾತನಾಡಿ ನಿನ್ನೆ ಬೆಳಗ್ಗೆಯಿಂದ ನಾವು ಕ್ಷೇತ್ರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಕಾರ್ಯಪ್ರವೃತ್ತರಾಗಿದ್ದೇವೆ, ಪೇಜ್ ಪ್ರಮುಖರನ್ನು ತೆಗೆದುಕೊಂಡು ಈ ಚುನಾವಣೆಯಲ್ಲಿ ನಾವು ಒಂದು ಪ್ರಯೋಗವನ್ನು ಮಾಡಿ ಅತೀ ಹೆಚ್ಚು ಮತವನ್ನು ಕೊಡಿಸಬಬೇಕು. ಕಳೆದ ಬಾರಿ ಕೇವಲ 180 ಮತಗಳಿಂದ ನಾವು ಸೋತಿದ್ದೇವೆ, ಆ ನೋವು ಇನ್ನೂ ನಮ್ಮಲ್ಲಿದೆ, ಈ ಸಲ ಆ ತಪ್ಪಾಗಬಾರದಂತೆ ಜಾಗೃತೆ ವಹಿಸಬೇಕು. ಕಳೆದ ಸಲವೇ ಮೈ.ವಿ.ರವಿಶಂಕರ್ ಅವರು ಗೆದ್ದು ಶಾಸಕರಾಗಬೇಕಿತ್ತು ಆದರೆ ಸಣ್ಣ ಅಂತರದಲ್ಲಿ ಅವರು ಸೋತರು. ಬಹುತೇಕ ನಮ್ಮ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಸಂಗತಿ. ಕೆ.ಆರ್.ಕ್ಷೇತ್ರದಲ್ಲಿ ಎಷ್ಟು ಮತದಾನ ಆಗುತ್ತದೋ ಅದರಲ್ಲಿ 99 % ಮೈ.ವಿ.ರವಿ ಅವರಿಗೇ ಬೀಳುತ್ತದೆ ಆದರೆ ಮತದಾನ ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಓಂದೊಂದೂ ಮತವೂ ಬಹು ಮುಖ್ಯವಾಗಿದೆ, ಪ್ರತಿಯೊಂದು ಮತದಾರರ ಬಳಿ ಹೋಗಿ ಮಾತನಾಡಿಸಿ ಅವರನ್ನು ಮನವೊಲಿಸುವ ಕಾರ್ಯ ನಾವೆಲ್ಲ ಮಾಡಬೇಕಿದೆ ಎಂದರು
ದಕ್ಷಿಣ ಪದವೀಧರ ಕ್ಷೇತ್ರದ ಭಾಜಪಾ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ಮಾತನಾಡಿ ಕೆ.ಆರ್.ಕ್ಷೇತ್ರದಲ್ಲಿ ಕಾರ್ಯಕರ್ತರು ನೋಂದಣಿ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಕೆ.ಆರ್.ಕ್ಷೇತ್ರದಲ್ಲಿ ಕಾರ್ಯಕರ್ತರುಗಳ ಹೆಚ್ಚಿನದಾಗಿ ಓಡಾಡಿ ಕೆಲಸ ನಿರ್ವಹಿಸುತ್ತಿರುವುದು ಸಂತಸ ತಂದಿದೆ. ಮತದಾರರನ್ನು ಮತದಾನಕ್ಕೆ ಕರೆದುಕೊಂಡು ಬರುವುದೂ ಸಹ ಮುಖ್ಯವಾಗಿದೆ. ಕೆ.ಆರ್.ಕ್ಷೇತ್ರದ ಮತಗಳು ನನಗೆ ಬಹು ಮುಖ್ಯವಾಗಿದೆ, ನೀವೆಲ್ಲರೂ ನನ್ನ ಗೆಲುವಿಗಾಗಿ ಶ್ರಮಿಸಬೇಕು ಎಂದು ಈ ಮೂಲಕ ಕೇಳಿಕೊಳ್ಳಿತ್ತೇನೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ಕೆ.ಆರ್.ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ಮೈಸೂರು ಮಹಾನಗರದ ಪ್ರಧಾನಕಾರ್ಯದರ್ಶಿ ವಾಣೀಶ್, ಉಪಾಧ್ಯಕ್ಷರಾದ ಸಂತೋಷ್ ಶಂಭು, ನಗರಪಾಲಿಕಾ ಸದಸ್ಯರಾದ ಬಿ.ವಿ.ಮಂಜುನಾಥ್, ಶ್ರೀಮತಿ ಸೌಮ್ಯ ಉಮೇಶ್, ಪಿ ಟಿ ಕೃಷ್ಣ ದಕ್ಷಿಣ ಪದವೀಧರ ಕೆ.ಆರ್.ಕ್ಷೇತ್ರದ ಚುನಾವಣಾ ಸಂಚಾಲಕರಾದ ರವಿ ಹಾಗೂ ಸಹ ಸಂಚಾಲಕರಾದ ನಾಗಶಂಕರ್, ಬಿ ಎಲ್ ಎ 2 1 ಪ್ರಸಾದ್ ಬಾಬು, ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿಯ ಸದಸ್ಯರಾದ ಹೇಮಂತ್ ಕುಮಾರ್, ಪ್ರಮುಖರಾದ ಮನು ಅಪ್ಪಿ(ಶೈವ) ಉಮೇಶ್, ಸಂತೋಷ್, ಪ್ರದೀಪ್ ಗೌರಿ ದೀಪು ಮಧು ಮುರುಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.