ನಿರಾಶ್ರಿತವಾಗಿದ್ದ ಮಗುವಿನ ಪೋಷಕರ ಪತ್ತೆ!
1 min readನಿರಾಶ್ರಿತವಾಗಿದ್ದ ಮಗುವಿನ ಪೋಷಕರ ಪತ್ತೆ
ಮೈಸೂರು ಜಿಲ್ಲೆ , ಹೆಚ್.ಡಿ. ಕೋಟೆ ತಾಲೋಕು , ನೂರಲಕುಪ್ಪೆ ಗ್ರಾಮದ ರಘು ಎಂಬುವವನು ದಿನಾಂಕ : 08/05/2022 ರಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆ ವಾಶ್ ರೂಂಮ್ಗೆ ಹೋಗಿ ಬರುವುದಾಗಿ ಹೇಳಿ ಮಗುವನ್ನು ನನ್ನ ಕೈಗೆ ಕೊಟ್ಟು ಹೋಗಿದ್ದು 2-3 ಗಂಟೆ ಆದರೂ ವಾಪಾಸು ಬಾರದ ಕಾರಣ ತಾನು ಮೈಸೂರಿಗೆ ಮಗುವನ್ನು ಕರೆದುಕೊಂಡು ಬಂದು, ಮೈಸೂರಿನ ಲಷ್ಕರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಲಷ್ಕರ್ ಪೊಲೀಸರು ಸದರಿ ಮಗುವಿನ ಪೋಷಣೆ ಮತ್ತು ರಕ್ಷಣೆಗಾಗಿ ಅಲ್ಲಾ ಮಕ್ಕಳ ರಕ್ಷಣಾ ಘಟಕ ಮೈಸೂರು ರವರಲ್ಲಿ ಚಿಟ್ಟಿದ್ದು, ಮಗು ಪ್ರಸ್ತುತ ವಿಶೇಷ ದತ್ತು ಕೇಂದ್ರ ಏಕಶನ ಜೋಗುಳ ದತ್ತು ಸೇವ ಸಂಸ್ಥೆ , ಕ್ಯಾತೂಂಗೆರೆ , ಮಂಡ್ಯ ಇಲ್ಲಿ ಇದ್ದು , ದಿನಾಂಕ : 11/05/2022 ರಂದು ಸದರಿ ಮಕ್ಕಳ ಘಟಕದ ಘಟಕಾಧಿಕಾರಿ ಶ್ರೀಮತಿ ಎನ್ ಅಪೇಕ್ಷಿತಾ ಎಂಬುವವರು ಪೋಷಕರು ತ್ಯಜಿಸಿ ನಿರಾಶ್ರಿತರನ್ನಾಗಿ ಮಾಡಿದ್ದ 10 ತಿಂಗಳ ಗಂಡು ಮಗುವಿನ ಪೋಷಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಪ್ರಕರಣದ ತನಿಖಾ ಕಾಲದಲ್ಲಿ 10 ತಿಂಗಳ ಗಂಡು ಮಗುವನ್ನು ತ್ಯಜಿಸಿ ನಿರಾಶ್ರಿತಾಗಿ ಮಾಡಿದ್ದ ಮಗುವಿನ ತಾಯಿ ಮತ್ತು ಮಗುವನ್ನು ಲಷ್ಕರ್ ಠಾಣೆಗೆ ಒಪ್ಪಿಸಿ ಹೋಗಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಗುವಿನ ತಾಯಿ ಮತ್ತು ಮಗುವನ್ನು ಶಾಲೆಗೆ ಬಿಟ್ಟು ಹೋದ ವ್ಯಕ್ತಿ ಇದ್ದರು. ಇನ್ಸ್ಟಾಗ್ರಾಂ ಮೂಲಕ ಪರಿಚಿತರಾಗಿ, ನಂತರ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು , ಮಗುವನ್ನು ತ್ಯಜಿಸಿ ಅನಾಥವಾಗಿ ಮಾಡಿ, ನಾವಿಬ್ಬರೂ ಒಟ್ಟಿಗೆ ಸೇರಬೇಕೆಂಬ ಉದ್ದೇಶದಿಂದ ಮಗುವನ್ನು ಅನಾಥವಾಗಿಸಲು ಒಳಸಂಚು ರೂಪಿಸಿ, ಪಿತೂರಿ ಮಾಡಿರುವುದು ಕಂಡು ಬಂದಿರುತ್ತದೆ. ತಾಯಿ, ಮಗು ಕಾಣೆಯಾಗಿರುವ ಬಗ್ಗೆ ಯಾದವಗಿರಿ ಹೊಸ ಠಾಣೆಯಲ್ಲಿ ಆಕೆಯ ಪತಿ ಪ್ರಕರಣ ದಾಖಅಸಿರುವುದು ತಿಳಿದು ಬಂದಿರುತ್ತದೆ. ಸದರಿ ಮಗುವನ್ನು ವಾರಸುದಾರರಿಗೆ ವಹಿಸುವ ಸಂಬಂಧ ಜಿಲ್ಲಾ ಮಕ್ಕಳ ಸಮಿತಿಯವರು ಕ್ರಮ ವಹಿಸಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆಯ ಶ್ರೀ.ಪ್ರದೀಪ್ ಗುಂಟಿ ,ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿಯವರಾದ ಶ್ರೀ .ಶಶಿಧರ್ ರವರ ನೇತೃತ್ವದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಶ್ ಇನ್ಸ್ಪೆಕ್ಟರ್ ಸಂತೋಷ್.ಪಿ.ಪಿ . ಮತ್ತು ಸಿಬ್ಬಂದಿಗಳು ಕೈಗೊಂಡಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ : ಚಂದ್ರಗುಪ್ತ, ಐ.ಪಿ.ಎಸ್, ರವರು ಪ್ರಶಂಸಿಸಿರುತ್ತಾರೆ.