ಮೈಸೂರಿಗೆ ಪ್ರಧಾನಿ ಮೋದಿಯವರ ಆಗಮನ ಹಿನ್ನಲೆ: ಸಿದ್ಧತೆ ಬಗ್ಗೆ ವಿವಿಧ ಸಂಘ ಸಂಸ್ಥೆಗಳೊಡನೆ ಚರ್ಚೆ

1 min read

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಯಾವ ರೀತಿ ಸಿದ್ಧತೆ ನಡೆಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಯೋಗ ದಿನದಂದು ಬರುತ್ತಿದ್ದಾರೆ ಎಂದು ಸಂತೋಷ ಇನ್ನೊಂದುಕಡೆ ನಮ್ಮ ಮೇಲೆ ಜವಾಬ್ದಾರಿ. ಬಹಳ ಪ್ರೀತಿಯಿಂದ ಮೈಸೂರಿಗೆ ಮೋದಿಯವರು ಬರುತ್ತಿರುವ ಸಂದರ್ಭದಲ್ಲಿ ನಾನೇನು ಮಾಡಬಹುದು ಎಂದು ಯೋಚಿಸಬೇಕು. ಮೈಸೂರಿನಿಂದ ನಾವು ಪ್ರಪಂಚಕ್ಕೆ ಯಾವ ರೀತಿ ಸಂದೇಶ ನೀಡಬೇಕು ಎಂದು ಯೋಚಿಸಬೇಕಿದೆ.

ಮನೆಗೆ ಯಾರಾದರೂ ಅತಿಥಿ ಬರುತ್ತಾರೆ ಎಂದರೆ ನಾವು ಹೇಗೆ ಮನೆಯಲ್ಲಿ ತಯಾರಿ ನಡೆಸುತ್ತೇವೆಯೋ ಅದೇ ರೀತಿ ಯೋಗ ದಿನಕ್ಕೋಸ್ಕರವಾಗಿ ನಾವು ಆ ರೀತಿ ತಯಾರಾಗಬೇಕಿದೆ. ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ಮತ್ತು ಯೋಗ ದಿಂದ ಲಾಭವನ್ನು ಪಡೆಯುತ್ತಿರುವವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನಾವೆಲ್ಲರೂ ಕಾರ್ಯವನ್ನು ರೂಪಿಸೋಣ. ನಿರಂತರವಾಗಿ ಮೈಸೂರಿನಲ್ಲಿ ಯೋಗವನ್ನು ಬೆಳೆಸಿಕೊಂಡು ಬರುತ್ತಾ ಇರುವವರಿಗೆ ಈ ಯಶಸ್ಸು ಸೇರಬೇಕು. ಯೋಗವನ್ನು ನಾವು ಕಲಿತು ಬೇರೆಯವರಿಗೆ ಕಲಿಸೋಣ, ಯೋಗ ಎಲ್ಲವನ್ನೂ ಮೀರಿದ್ದು. ಪ್ರಧಾನಿ ಮೋದಿಯವರು ಮೈಸೂರಿನಲ್ಲಿ ಇನ್ನೂ ಸ್ಥಳವನ್ನು ನಿಗದಿ ಮಾಡಿಲ್ಲ, ನಮ್ಮ ಮೈಸೂರಿನ ಯೋಗ ಅರಮನೆಯಿಂದ ಚಾಮುಂಡಿಗೆ ಅಂದರೆ ಚಾಮುಂಡಿ ಬೆಟ್ಟದಿಂದ ಅರಮನೆಯವರೆಗೂ ಸಹ ಯೋಗವನ್ನು ಮಾಡುವ ಒಂದು ಕಲ್ಪನೆಯನ್ನಿಟ್ಟುಕೊಂಡಿದ್ದೇವೆ. ಜೂನ್ 21 ರಂದು ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿಸೋಣ, ನಾವೆಲ್ಲಾ ಇದರಲ್ಲಿ ಕೈಲಾದ ಅಳಿಲು ಸೇವೆಯನ್ನು ಮಾಡೋಣ ಎಂದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಧೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ.ಕೃಷ್ಣಯ್ಯ, ಪತಂಜಲಿ ಯೋಗ ಕೇಂದ್ರದ ಸತ್ಯನಾರಾಯಣ, ಆಯುಷ್ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಸೀತಾಲಕ್ಷ್ಮಿ, ಜಿ.ಎಸ್.ಎಸ್ ಸಂಸ್ಥೆಯ ಶ್ರೀ ಹರಿ ಇನ್ನಿತರ ಪ್ರಮುಖರು ಹಾಜರಿದ್ದರು.

About Author

Leave a Reply

Your email address will not be published. Required fields are marked *