ಚಾಮರಾಜೇಶ್ವರ ದೇಗುಲಕ್ಕೆ ಬಂತು ನೂತನ ರಥ

1 min read

ಚಾಮರಾಜನಗರ: ರಾಜ್ಯದಲ್ಲಿ ಆಷಾಡ ಮಾಸದಲ್ಲಿ ನಡೆಯುವ ಚಾಮರಾಜನಗರದ ಶ್ರೀ ಚಾಮರಾಜೇಶ್ವರಸ್ವಾಮಿಯ ಬ್ರಹ್ಮಥೋತ್ಸವ ಹಿನ್ನಲೆ ಬೆಂಗಳೂರಿನಿಂದ ಚಾಮರಾಜನಗರದ ಶ್ರೀಚಾಮರಾಜೇಶ್ವರಸ್ವಾಮಿಯ ನೂತನ ರಥ ಆಗಮಿಸಿದ್ದು, ನಗರದಲ್ಲಿ ಸಾಂಪ್ರದಾಯಿಕವಾಗಿ ಶಸಸಕ ಸಿ.ಪುಟ್ಟರಂಗಶೆಟ್ಟಿರವರು ಪೂಜೆ ಸಲ್ಲಿಸಿದರು.

ಡೊಳ್ಳುಕುಣಿತ, ಮಂಗಳವಾದ್ಯ ಹಾಗೂ ಕಲಾತಂಡ ಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಶ್ರೀ ಆದಿಶಕ್ತಿ ದೇವಸ್ಥಾನದ ಮುಂಭಾಗ ನೂತನ ರಥಕ್ಕೆ ವಿವಿಧ ಹೂವುಗಳಿಂದ ಶೃಂಗರಿಸಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳ‌ ಸಮ್ಮುಖದಲ್ಲಿ ನೂತನ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಆದಿಶಕ್ತಿ ದೇವಸ್ಥಾನದ ಮುಂಭಾಗದಿಂದ ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀ ಭವನೇಶ್ವರಿವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿಬೀದಿ, ಅಗ್ರಹಾರ ಬೀದಿ ಮೂಲಕ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು. ಇನ್ನು ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಮಂಗಳವಾದ್ಯ ಸೇರಿದಂತೆ ಇತರೆ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು.

ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡು ಶ್ರೀಚಾಮರಾಜೇಶ್ವರಸ್ವಾಮಿಗೆ ಭಕ್ತಿ ಸಮರ್ಪಿಸಿದರು.ಇದು ಆಷಾಢ ಮಾಸದಲ್ಲಿ ನಡೆಯುತ್ತಿದ್ದ ರಾಜ್ಯದ ಏಕೈಕ ರಥೋತ್ಸವವಾಗಿದೆ.

About Author

Leave a Reply

Your email address will not be published. Required fields are marked *