ನಕಲಿಗಳ ಹಾವಳಿ ಪೊಲೀಸರನ್ನೇ ಬಿಡಲಿಲ್ಲ! ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

1 min read

ಮೈಸೂರು: ನಕಲಿಗಳ ಹಾವಳಿ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗು ಈ ನಕಲಿಗಳ ಹಾವಳಿ ತಪ್ಪಿದ್ದಲ್ಲ. ಇದೀಗಾ ಮೈಸೂರು ನಗರದ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಓರ್ವರಿಗೆ ಸಾಮಾಜಿಕ ಜಾಲತಾಣವಾದ ಫೆಸ್ಬುಕ್‌ನಲ್ಲಿ ಅವರ ಹೆಸರಿನಲ್ಲೇ ನಕಲಿ ಖಾತೆ ತೆರದು ಇದೀಗಾ ಸಾಕಷ್ಟು ಜನರ ಬಳಿ ಹಣದ ಸಮಸ್ಯೆ ಇದೆ ಕೊಡಿ ಎಂದು ಸಂದೇಶ ಮಾಡುತ್ತಿದ್ದಾರೆ.

ಈ ಬಗ್ಗೆ ಆ ಪೊಲೀಸ್ ಸಿಬ್ಬಂದಿಯ ಸ್ನೇಹಿತರಾದವರು ಇವರಿಗೆ ಕರೆ ಮಾಡಿ ನೀವು ನನಗೆ ಯಾಕೆ ಹಣ ಕೇಳಿದ್ರಿ ? ಕರೆ ಮಾಡಿದ್ರೆ ನಾನೇ‌ ಕೊಡುತ್ತಿದ್ದೆ ಎಂದಿದ್ದಾರೆ. ಆದರೆ ಈ ಬಗ್ಗೆ ಏನು ಅರಿಯದ ಪೊಲೀಸ್ ಸಿಬ್ಬಂದಿ ನಾನು ಹಾಗೆ ಮೇಸೆಜ್ ಮಾಡಿಲ್ಲ ಎಂದಿದ್ದಾರೆ. ಹೀಗೆ ಮೆಸೆಜ್ ಬಂದಿರುವುದಾಗಿ ತಿಳಿಸಿದ ಸ್ನೇಹಿತರ ಮಾತು ಕೇಳಿ‌ ಆ ಖಾತೆ ನೋಡಿದಾಗ ಅದು ನಕಲಿ ಖಾತೆ ಎಂದು ಗೊತ್ತಾಗಿದೆ.

ಕೂಡಲೇ ಆ ಪೊಲೀಸ್ ಸಿಬ್ಬಂದಿ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ನನ್ನ ಹೆಸರು ಹೇಳಿಕೊಂಡು ದುಡ್ಡು ಕೊಡಿ ಎಂದರೇ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಆಗಿದೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಮೈಸೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

ಇದು ಪೊಲೀಸರು ಮಾತ್ರವಲ್ಲ, ಮೈಸೂರಿನ ಶ್ರೀಮನ್ ಮಹಾರಾಜರಾಗಿರುವ ಯದುವೀರ್ ಒಡೆಯರ್ ಅವರ ಹೆಸರಿನಲ್ಲು ಹೀಗೆ ನಕಲಿ ಖಾತೆ ತೆರೆದು ಅನಗತ್ಯ ಪೋಷ್ಟ್ ಹಾಕಿ ಗೊಂದಲ ಸೃಷ್ಟಿಸಿದ್ರು. ಸೋ ಇದು ಇಂತವರಿಗೆ ಆಗುತ್ತೆ ಅಂತಲ್ಲ. ಎಲ್ಲರಿಗು ಆಗುವ ಸಾಧ್ಯತೆ ಇದೆ. ನಿಮಗೆ ಎಚ್ಚರಿಕೆ ಇರಲಿ ಎಂದು ಈ‌ ಮೂಲಕ ಹೀಗೋಂದು ಸಂದೇಶ ಕೊಡುತ್ತಿದ್ದೇವೆ.

About Author

Leave a Reply

Your email address will not be published. Required fields are marked *