ಮೈಸೂರಿನಲ್ಲಿ ಇಂದು ಬರೋಬ್ಬರಿ 2529 ಕೊರೋನಾ ಪಾಸಿಟಿವ್ ಕೇಸ್ ದಾಖಲು
1 min read![](https://nannurumysuru.com/wp-content/uploads/2021/05/Mysuru-1.jpg)
ಮೈಸೂರು: ಮೈಸೂರಿನಲ್ಲಿ ಇಂದು ಬರೋಬ್ಬರಿ 2529 ಹೊಸ ಪಾಸಿಟಿವ್ ಕೇಸ್ ದಾಖಲಾಗಿದೆ. ಇನ್ನು ಇಂದು 1424 ಮಂದಿ ಗುಣಮುಖರಾಗಿದ್ದು, ಒಟ್ಟು ಈ ವರೆಗು 66219 ಮಂದಿ ಗುಣಮುಖರಾಗಿದ್ದಾರೆ.
ಮೈಸೂರಿನಲ್ಲಿ ಕರೋನಾ ಸೋಂಕಿತರು ಮರಣ ಮೃದಂಗ ಮುಂದುವರೆದಿದ್ದು, ಇಂದು 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 23 ದಿನದಲ್ಲಿ 142 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿಯ ವರೆಗು ಮೈಸೂರಿನಲ್ಲಿ ಒಟ್ಟು 1212 ಮಂದಿ ಕರೋನಾಗೆ ಮೃತಪಟ್ಟಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ಇದುವರೆಗು ಒಟ್ಟು 79304 ಮಂದಿಗೆ ಸೋಂಕು ತಗುಲಿದ್ದು, ಇದೀಗಾ ಸಕ್ರಿಯ ಪ್ರಕರಣಗಳ ಸಂಖ್ಯೆ 11880ಕ್ಕೆ ಏರಿದೆ.
![](https://nannurumysuru.com/wp-content/uploads/2021/05/WhatsApp-Image-2021-05-01-at-7.05.20-PM.jpeg)