ಮೈಸೂರು ಸಂಸ್ಥಾನವನ್ನ ನಾಲ್ಕು ಭಾಗ ಮಾಡಿದ್ದ ಬ್ರಿಟಿಷರು!
1 min readಅದು 17ನೇ ಶತಮಾನದ ಕೊನೆಯ ಭಾಗ. ಆ ವೇಳೆ ಬ್ರಿಟಿಷರು ಹಾಗೂ ಟಿಪ್ಪು ನಡುವೆ ಘೋರವಾದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ನಡೆಯುತ್ತಿತ್ತು. ಈ ವೇಳೆ ಮೈಸೂರು ಒಡೆಯರ್ರಿಂದ ಆಡಳಿತ ಕಸಿದುಕೊಂಡಿದ್ದ ಟಿಪ್ಪು ಯುದ್ಧದ ನೇತೃತ್ವ ವಹಿಸಿದ್ದ.
ಸಾಮಾನ್ಯ ಸೈನಿಕನಾಗಿದ್ದ ಟಿಪ್ಪು ಬಳಿಕ ಮೈಸೂರು ಸಂಸ್ಥಾನದ ಚುಕ್ಕಾಣಿ ಹಿಡಿದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ. ಆದರೆ ನಿಜಾಮರ ಸಹಾಯ ಬ್ರಿಟಿಷರಿಗೆ ಸಿಕ್ಕ ಕಾರಣ ಸುಲಭವಾಗಿ ಟಿಪ್ಪುವನ್ನ ಸೋಲಿಸಲು ಬ್ರಿಟಿಷರಿಗೆ ಸುಲಭವಾಯಿತು. ಅಲ್ಲದೆ ಅತಿ ದೊಡ್ಡ ಬ್ರಿಟಿಷರ ಸೇನೆ ಟಿಪ್ಪು ಸೋಲಿಸಿ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಕೊಲ್ಲುತ್ತದೆ. ಈ ವೇಳೆ ಟಿಪ್ಪುವಿನ ಸಾವಿನ ನಂತರ ಬ್ರಿಟಿಷರ ಒಪ್ಪಂದದಂತೆ ಮೈಸೂರು ಸಂಸ್ಥಾನ ನಾಲ್ಕು ಭಾಗವಾಗುತ್ತೆ.
ನಾಲ್ವರಿಗೆ ನಾಲ್ಕು ಭಾಗ
ಆಂಗ್ಲೋ ಮೈಸೂರು ನಾಲ್ಕನೇ ಯುದ್ದದ ವೇಳೆ ಟಿಪ್ಪು ಅಧೀನಾದಲ್ಲಿದ್ದ ಮೈಸೂರು ಸಂಸ್ಥಾನ ಬಳಿಕ ಒಡೆಯರ್ ಕುಟುಂಬಕ್ಕೆ ಸೇರುತ್ತೆ. ಇದಕ್ಕೆ ಕಾರಣ ಬ್ರಿಟಿಷರು ಮಾಡಿಕೊಂಡಿದ್ದ ಒಪ್ಪಂದ. ಅದರಂತೆ ಲಕ್ಷ್ಮಮ್ಮಣ್ಣಿ ಅವರು ಈ ಒಪ್ಪಂದದ ಮಾತುಕತೆ ನಡೆಸುತ್ತಾರೆ. ಇದರ ಅನ್ವಯ ಮೈಸೂರು ಸಂಸ್ಥಾನವನ್ನ ಬ್ರಿಟಿಷರು ನಾಲ್ಕು ಭಾಗಗಳಾಗಿ ಮಾಡ್ತಾರೆ. ಅದು ಟಿಪ್ಪು ಹಾಗೂ ಹೈದರ್ ಗೆದ್ದಿದ್ದ ಮರಾಠವಾಡ ಹಾಗೂ ಹೈದರಾಬಾದ್ನ ಭಾಗಗಳು ಹಾಗೂ ಮೈಸೂರು ಭಾಗಗಳನ್ನ ನಾಲ್ಕು ಭಾಗ ಮಾಡಲಾಯಿತು. ಅದರಂತೆ ಟಿಪ್ಪು ವಿರುದ್ಧ ಬ್ರಿಟಿಷರಿಗೆ ಬೆಂಬಲ ನೀಡಿದ ಹೈದರಾಬಾದ್ ನಿಜಾಮರಿಗೆ ಒಂದು ಭಾಗ. ಬ್ರಿಟಿಷರಿಗೆ ಸಹಕಾರ ನೀಡಿದ ಮರಾಠರಿಗೆ ಎರಡನೇ ಭಾಗ ಹಾಗೂ ಬ್ರಿಟಿಷರಿಗೆ ಮೂರನೇ ಭಾಗ ನೀಡಲಾಗುತ್ತೆ. ಉಳಿದಂತೆ ಮೈಸೂರು ಸಂಸ್ಥಾನಕ್ಕೆ ಒಂದು ಭಾಗ ನೀಡಲಾಯಿತು.
ಮೈಸೂರು ಜಿಲ್ಲೆಯ 8 ಜಿಲ್ಲೆ ಮಾತ್ರ ಒಡೆಯರ್ಗೆ!
ಇನ್ನು ಟಿಪ್ಪು ಹತನಾದ ಬಳಿಕ ಹಳೆ ಮೈಸೂರಿನಲ್ಲಿ 8 ಜಿಲ್ಲೆ ಮಾತ್ರವೇ ಇತ್ತು. ಇದನ್ನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ನೀಡಿ ಆಡಳಿತ ನಡೆಸಲು ಹೇಳುತ್ತಾರೆ. ಆದರೆ ಈ ವೇಳೆ ಮುಮ್ಮಡಿ ಅವರು ಐದು ವರ್ಷದ ಬಾಲಕರಾಗಿದ್ದ ಕಾರಣ ರಾಜಮಾತೆಯಾಗಿ ಲಕ್ಷ್ಮಮ್ಮಣ್ಣಿ ಅವರಿಗೆ ಅಧಿಕಾರ ನಡೆಸಲು ನೀಡುತ್ತಾರೆ. ಅಲ್ಲಿಯವರೆಗು ಶ್ರೀರಂಗಪಟ್ಟಣದಲ್ಲಿದ್ದ ರಾಜಧಾನಿಯನ್ನ ಮೈಸೂರಿಗೆ ಸ್ಥಳಾಂತರ ಮಾಡಿ ಐದು ವರ್ಷದ ಬಾಲಕ ಮುಮ್ಮಡಿ ಅವರು ಅಧಿಕಾರ ನಡೆಸಲು ಮಾರ್ಗದರ್ಶಕರಾಗಿ ದಿವಾನ್ ಪೂರ್ಣಯ್ಯ ಹಾಗೂ ರಾಜಮಾತೆಯಾಗಿ ಲಕ್ಷ್ಮಮ್ಮಣ್ಣಿ ಜೊತೆಯಾಗುತ್ತಾರೆ.
ಹೆಸರಿಗೆ ಮಾತ್ರ ಒಡೆಯರ್ಗೆ ಅಧಿಕಾರ ನೀಡಿದ್ದ ಬ್ರಿಟಿಷರು’ ಸಂಪೂರ್ಣ ಹಿಡಿತ ಬ್ರಿಟಿಷರದ್ದು.!
ಹೌದು ಬ್ರಿಟಿಷರು ಸಂಪೂರ್ಣವಾಗಿ ಅಧಿಕಾರವನ್ನ ಒಡೆಯರ್ ಅವರಿಗೆ ನೀಡಿರಲಿಲ್ಲ. ಅದಕ್ಕಾಗಿ ದಿವಾನರನ್ನ ನೇಮಕ ಮಾಡಿ, ಪ್ರತಿ ವರ್ಷ ಇಂತಿಷ್ಟು ತೆರಿಗೆ ನೀಡಬೇಕು. ಯಾವುದೇ ಕಾರಣಕ್ಕು ನಮಗೆ ಮಾಹಿತಿ ಇಲ್ಲದೆ ಯುದ್ದ ಸಾರುವಂತಿಲ್ಲ. ಎಲ್ಲವು ಕೂಡ ನಮ್ಮ ಅಣತಿಯಂತೆ ನಡೆಯಬೇಕೆಂಬ ಆಜ್ಞೆ ಹೊರಡಿಸಿದ್ದರು. ಹಾಗಾಗಿಯೇ ಮುಮ್ಮಡಿ ಅವರ ಆಡಳಿತ ಇದ್ದರು, ಹೆಚ್ಚಿನ ಜವಾಬ್ದಾರಿ ಲಕ್ಷ್ಮಮ್ಮಣ್ಣಿ ಅವರಿಗೆ ನೀಡಿದರು ಸಂಪೂರ್ಣ ಇದರ ನೋಡಿಕೊಳ್ಳುವಿಕೆ ಬ್ರಿಟಿಷರದ್ದೆ ಆಗಿತ್ತು. ಇದರಿಂದ ಮತ್ತೇ ಈ ಹಿಡಿತ ತಪ್ಪಬಾರದೆಂದು ಬ್ರಿಟಿಷರು ಈ ಒಪ್ಪಂದದ ಕರಾರು ಮಾಡಿದ್ದರು. ಇದಕ್ಕೆ ಲಕ್ಷ್ಮಮ್ಮಣ್ಣಿ ಅವರು ಸಹ ಸಹಿ ಹಾಕಿದ್ದರು.
ಇದು ಮೈಸೂರು ಸಂಸ್ಥಾನ ನಾಲ್ಕು ಭಾಗವಾಗಿ ಕೇವಲ ಹೆಸರಿಗೆ ಮಾತ್ರ ಅಧಿಕಾರಿ ನೀಡಿದ್ದ ಬ್ರಿಟಿಷರ ಕ್ರೂರತ್ವದ ಹಾಗೂ ದಬ್ಬಾಳಿಕೆಯ ತಂತ್ರ.
ನನ್ನೂರು ಮೈಸೂರು ಟೀಂ..