EXCLUSIVE :-ಚಾಮುಂಡಿ ಬೆಟ್ಟದಲ್ಲಿ ಭೂಕುಸಿತಗೊಂಡಿದ್ದ ಸ್ಥಳ ಈಗ ಹೇಗಿದೆ ಗೊತ್ತಾ!?
1 min readಮೈಸೂರು : ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿತ್ತು. ಮಳೆಯಿಂದ ಕುಸಿದಿದ್ದ ನಂದಿ ಮಾರ್ಗವನ್ನ ಬಂದ್ ಮಾಡಿ ಪ್ರವಾಸಿಗರ ಸಂಪರ್ಕ ನಿಷೇಧ ಹೇರಲಾಗಿತ್ತು. ಆದರೆ ಪ್ರಸ್ತುತ ಈ ರಸ್ತೆ ಇನ್ನು ಹಾಗೆ ಇದ್ದು ಜನರ ಓಡಾಟ ಮಾತ್ರ ನಿಂತಿಲ್ಲ.
ನಾಲ್ಕು ತಿಂಗಳಾದರು ಶುರುವಾಗದ ಕಾಮಗಾರಿ:-
ಭೂಕುಸಿತವಾಗಿ ನಾಲ್ಕೈದು ತಿಂಗಳಾದರು ಇಲ್ಲಿನ ರಸ್ತೆ ಕಾಮಗಾರಿ ಶುರುವಾಗಿಲ್ಲ. ಇದರಿಂದ ನಂದಿ ವಿಗ್ರಹ ನೋಡಲು ಬರುವ ಭಕ್ತರು, ಪ್ರವಾಸಿಗರಿಗೆ ಈ ಕಿರಿಕಿರಿಯಿಂದ ಇನ್ನು ಮುಕ್ತಿ ಸಿಕ್ಕಿಲ್ಲ. ಭೂ ಕುಸಿತ ಉಂಟಾದ ವೇಳೆ ಅಧಿಕಾರಿಗಳು, ಶಾಸಕರು, ಸಚಿವರು ಈ ಸ್ಥಳಕ್ಕೆ ಭೇಟಿ ಕೊಟ್ಟು ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದರ ಚರ್ಚೆ ಆಗಿತ್ತು. ಆದರು ಈ ವರೆಗು ಯಾವುದೇ ಕಾಮಗಾರಿ ಆರಂಭವಾಗಿಲ್ಲ.
ಭೂ ಕುಸಿತ ಸ್ಥಿತಿಯಲ್ಲೇ ಇದೆ ನಂದಿ ಮಾರ್ಗ:-
ಇನ್ನು ಭೂಕುಸಿತವಾದ ಸ್ಥಿತಿಯಲ್ಲೇ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಇದೆ ಅನ್ನೋದೆ ಸದ್ಯದ ಬೇಸರದ ಸಂಗತಿ. ಸಾರ್ವಜನಿಕರು, ಪ್ರವಾಸಿಗರಿಗೆ ನಂದಿ ಮಾರ್ಗದಲ್ಲಿ ಎಂಟ್ರಿ ಇಲ್ಲದೆ, ಬ್ಯಾರಿಕೇಡ್ ದಾಟಿ ಆ ಸ್ಥಳ ನೋಡಲು ಹೋಗ್ತಿದ್ದಾರೆ. ಕಂಪ್ಲೀಟ್ ರಸ್ತೆ ಬಂದ್ ಮಾಡಿ ಕಾಮಗಾರಿಯು ಮಾಡದೆ ಇರುವ ಅಧಿಕಾರಿಗಳಿಂದ ಸಾರ್ವಜನಿಕರು ಇಡೀ ಶಾಪ ಹಾಕ್ತಿದ್ದಾರೆ. ಮತ್ತೊಂದು ಕಡೆ ನಂದಿ ನೋಡಲು ಕಾಲ್ನಡಿಗೆಯಲ್ಲೇ ಕೆಲವರು ಹೋಗುತ್ತಿದ್ದಾರೆ.
ಅಧಿಕಾರಿಗಳಿಗೆ ಗೊಂದಲ!?
ರಸ್ತೆ ಸರಿ ಮಾಡಬೇಕಾ? ಬೇಡವಾ ಎಂಬ ಗೊಂದಲದಲ್ಲಿ ಅಧಿಕಾರಿಗಳು ಇದ್ದಂತಿದೆ. ಕಾರಣ ನಾಲ್ಕೈದು ತಿಂಗಳಿದ್ದೆ ಇದ್ದ ಪರಿಸ್ಥಿತಿಯೇ ಈಗಲು ಇದೆ ಎಂದರೆ ಅಧಿಕಾರಿಗಳು ಏನ್ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ನಡುವೆ ಸಚಿವರು ಕೂಡ ಈ ಬಗ್ಗೆ ಬಂದು ಭೇಟಿ ಕೊಟ್ಟು ಹೋಗಿದ್ದು ಬಿಟ್ಟರೆ ಈ ಬಗ್ಗೆ ಸೂಕ್ತ ಕ್ರಮ ಪರಿಹಾರ ಮಾತ್ರ ಕೈಗೊಂಡಿಲ್ಲ.
ಸದ್ಯ ಪ್ರವಾಸಿಗರು ಈ ನಡೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಆದರೆ ಸದ್ಯದ ಈ ಪರಿಸ್ಥಿತಿ ನೋಡಿದ್ರೆ ಇನ್ನು ನಾಲ್ಕೈದು ತಿಂಗಳಾದರು ಈ ರಸ್ತೆ ಸರಿ ಹೋಗುವ ಲಕ್ಷಣ ಮಾತ್ತ ಕಾಣ್ತಿಲ್ಲ. ಆದಷ್ಟು ಬೇಗ ಈ ರಸ್ತೆ ಮಾಡಿ ಜನರ, ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಿಕೊಡಬೇಕಿದೆ.