ಉಕ್ರೇನ್ ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಮನೆಗೆ ಶಾಸಕ ರಾಮದಾಸ್ ಭೇಟಿ..
1 min readಮೈಸೂರು:
ಉಕ್ರೇನ್ ನಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಮನೆಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ನಂತರ ಮಾತನಾಡಿದ ಶಾಸಕಎಸ್.ಎ.ರಾಮದಾಸ್, “ಉಕ್ರೇನ್ ನಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರತ ಸರ್ಕಾರ ಅವರನ್ನು ರಕ್ಷಿಸಲು ಪಣ ತೊಟ್ಟಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು ಕೆಲವೇ ದಿನಗಳಲ್ಲಿ ಅಷ್ಟೂ ಜನ ಭಾರತೀಯರು ಸುರಕ್ಷಿತವಾಗಿ ಮರಳಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಎಲ್ಲಾ ಭಾರತೀಯರನ್ನೂ ಕೂಡಾ ಸುರಕ್ಷಿತವಾಗಿ ದೇಶಕ್ಕೆ ಕರೆತರುತ್ತೇವೆ ಇದರಲ್ಲಿ ಯಾವುದೇ ಸಂಶಯವಿಲ್ಲ” ಎಂದರು.
ಉಕ್ರೇನ್ ನಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿರುವ ಟಿ. ಕೆ.ಲೇಔಟ್ ನ ಮುಕುಂದ್ ಎಂಬ ವಿದ್ಯಾರ್ಥಿ ಮಾತನಾಡಿ, “ನಮಗೆ ನಿಜಕ್ಕೂ ಭಾರತ ಸರ್ಕಾರ ಚೆನ್ನಾಗಿ ಸ್ಪಂದಿಸಿ ನಮ್ಮನ್ನು ಮನೆ ತಲುಪುವವರೆಗೂ ಕೂಡಾ ಯೋಗಕ್ಷೇಮ ವಿಚಾರಿಸಿತು. ಆಹಾರದ ಜೊತೆಗೆ ಆಶ್ರಯಕ್ಕೆ ಎಲ್ಲೂ ಕೂಡಾ ತೊಂದರೆಯಾಗದಂತೆ ನೋಡಿಕೊಂಡಿತು. ಇದಕ್ಕೆ ಭಾರತ ಸರ್ಕಾರಕ್ಕೆ, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದರು.
ಟಿ. ಕೆ ಲೇಔಟ್ ನ ಮುಕುಂದ್, ಶ್ರೀ ಗಣೇಶ ಹಾಗೂ ಶ್ರೀರಾಂಪುರ ನಿವಾಸಿ ಪ್ರಿಯಾಂಕ ಗುರುಮಲ್ಲೇಶ್ ಅವರ ಮನೆಗೆ ಭೇಟಿ ನೀಡಿ ಯೋಗಕ್ಷ್ಮೇಮ ವಿಚಾರಿಸಿದರು. ನಗರಪಾಲಿಕಾ ಸದಸ್ಯೆ ಗೀತಾಶ್ರೀ ಯೋಗಾನಂದ್, ಇನ್ನಿತರರು ಹಾಜರಿದ್ದರು.