ಉಕ್ರೇನ್- ರಷ್ಯಾ ವಾರ್’ ಮೈಸೂರಿಗೆ ಹಿಂದಿರುಗಿದ ವಿದ್ಯಾರ್ಥಿನಿ!
1 min readಉಕ್ರೇನ್- ರಷ್ಯಾ ಯುದ್ಧದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದ್ದು ಮೈಸೂರಿನ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಯುದ್ಧ ನಡೆಯುವ ಒಂದು ದಿನ ಮುನ್ನ ತವರಿಗೆ ಮರಳಿದ್ದಾರೆ. ಸಾಕಷ್ಟು ಆತಂಕ ಮೂಡಿಸಿದ್ದ ವೇಳೆ ಉಕ್ರೇನ್ ರಾಯಭಾರಿ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಆತಂಕವಿದ್ದರೆ ತವರಿಗೆ ಹೋಗಿ ಎಂದು ಸೂಚನೆ ನೀಡಿತ್ತು. ಇದಕ್ಕಾಗಿ ಬೇಕಾದ ವ್ಯವಸ್ಥೆ ಕೂಡ ಕಲ್ಪಿಸಿತ್ತು. ಈ ವೇಳೆ ಮೈಸೂರಿನ ಶ್ರೀರಾಂಪುರದ ನಿವಾಸಿ ಗುರು ಮಲ್ಲೇಶ್ ಹಾಗೂ ರೀನಾಕುಮಾರಿ ದಂಪತಿಯ ಪುತ್ರಿ ಪ್ರಿಯಾಂಕ ಮೊನ್ನೆ ಬೆಳಗ್ಗೆ ಮೈಸೂರಿಗೆ ತಲುಪಿದ್ದಾರೆ.
ಉಕ್ರೇನ್ನ ಬುಕವಿನಿಯನ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಪ್ರಿಯಾಂಕ ಅವರು ನನ್ನೂರು ಮೈಸೂರುನೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡರು. ಯುದ್ಧ ಆಗುತ್ತೆ? ಆಗಲಿದೆ ಎಂದು ಹೇಳುತ್ತಲೇ ಇದ್ದರು. ಆದರೆ ಇದೇ ಆತಂಕದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು. ಆದರೆ ನಾನು ನನ್ನ ಪೋಷಕರ ಜೊತೆ ಮಾತನಾಡಿ ಆನ್ಲೈನ್ ಕ್ಲಾಸ್ ಈಗಾಗಲೇ ನಡೆಯುತ್ತಿದ್ದ ಕಾರಣ ತವರಿಗೆ ಮರಳಿದ್ದೇನೆ. ಮೊದಲಿಗೆ ಕೀವ್ ರಾಜಧಾನಿಯಿಂದ ಶಾರ್ಜ್ ವಿಮಾನ ನಿಲ್ದಾಣ ತಲುಪಿ, ಶಾರ್ಜಾದಿಂದ ಬೆಂಗಳೂರಿಗೆ ಬಂದಿಳಿದೆ. ಅಲ್ಲಿ ನನ್ನ ಪೋಷಕರು ಬಂದು ನನಗೆ ಮೈಸೂರಿಗೆ ಕರೆತಂದರು.
ನಿನ್ನೆ ಸಾಕಷ್ಟು ವಿದ್ಯಾರ್ಥಿಗಳು ಬರಬೇಕಿತ್ತು’ ಅಷ್ಟರಲ್ಲಿ ಯುದ್ಧ ಶುರುವಾಯಿತು.!
ನನ್ನ ಜೊತೆ ಓದುತ್ತಿದ್ದ ಸ್ನೇಹಿತರು ಸೇರಿ ಹಲವರು ವಿಮಾನದ ಮೂಲಕ ಬಂದೇವು. ಆದರೆ ನಿನ್ನೆ ಹಲವರು ಟಿಕೆಟ್ ಬುಕ್ ಮಾಡಿದ್ದರು. ಆದರೆ ಯುದ್ಧ ಘೋಷಣೆಯಾಗಿ ವಿಮಾನ ನಿಲ್ದಾಣವೆಲ್ಲ ಬಂದ್ ಆಗಿದೆ. ಎಲ್ಲರು ಈಗ ಅಲ್ಲಿಯೇ ಸಿಲುಕಿದ್ದಾರೆ. ಕರ್ನಾಟಕದವೇ ನಾಲ್ಕೈದು ಮಂದಿ ಈಗಾಗಲೇ ಸಿಲುಕಿದ್ದಾರೆ. ಇನ್ನು ನನ್ನ ಸೀನಿಯರ್ಗಳು ತುಂಭಾ ಜನ ಇದ್ದಾರೆ. ಅವರು ಕೂಡ ಅಲ್ಲಿಯೇ ಸಿಲುಕಿದ್ದಾರೆ. ನಾನು ಬರುವ ಫ್ಲೈಟ್ನಲ್ಲಿ ಬೆಂಗಳೂರಿನ ನನ್ನ ಸ್ನೇಹಿತ ಸೇರಿ ಕರ್ನಾಟಕದ ನಾಲ್ಕೈದು ಜನರ ಬಂದೆವು. ಆದರೆ ನಿನ್ನೆ ಬರುವ ಮುನ್ನವೇ ಯುದ್ಧ ಶುರುವಾಗಿ ಎಲ್ಲರು ಸಿಲುಕಿದ್ದಾರೆ ಅಂತಾರೆ ಪ್ರಿಯಾಂಕ ಅವರು.