ತಾಜ್‌ಮಹಲ್ ಹಿಂದಿಕ್ಕಿದ ನಮ್ಮ‌ ಮೈಸೂರ ಅರಮನೆ!

1 min read

ಮೈಸೂರು ಅಂದ್ರೆ ನಮಗೆ ನೆನಪಾಗೋದೆ ವಿಶ್ವವಿಖ್ಯಾತ ಜಂಬೂಸವಾರಿ, ಅರಮನೆ. ಇಂತಹ ಅರಮನೆ ಇದೀಗಾ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ತಾಜ್‌ಮಹಲ್‌ನ್ನ ಹಿಂದಿಕ್ಕಿದೆ. ಈ ಮೂಲಕ 15ನೇ ಸ್ಥಾನ ಪಡೆದು ತಾಜ್‌ಮಹಲ್‌ನ್ನ 17ನೇ ಸ್ಥಾನಕ್ಕೆ ನೂಕಿದೆ. ಹೌದು ಒರೋಬ್ಬರಿ 1ಲಕ್ಷದ 93 ಸಾವಿರಕ್ಕು ಹೆಚ್ಚು ಮಂದಿ ಮೈಸೂರು ಅರಮನೆಯನ್ನ ರಿವ್ಯೂ ಮಾಡಿದ್ದಾರೆ. ಹಾಗಾಗಿಯೇ ಗೂಗಲ್ ನಲ್ಲಿ ಹೆಚ್ಚು ಜನ ಸರ್ಚ್ ಮಾಡಿದ್ದಾರೆ. ಇದು ಪ್ರಪಂಚದಲ್ಲೇ ಮೈಸೂರು ಅರಮನೆಗೆ ಸಿಕ್ಕ ಮತ್ತೊಂದು ದೊಡ್ಡ ಗೌರವ ಆಗಿದೆ.

ಇನ್ನು ಆ 20 ಪ್ರಸಿದ್ದ ತಾಣಗಳು ಯಾವುದು? ಯಾವುದನ್ನ ಜನರು ಹೆಚ್ಚು ಸರ್ಚ್ ಮಾಡಿರೋ ಸ್ಥಳ ಎಂದರೆ.

ಮೆಕ್ಕಾ ಮಸೀದಿ.
ಇಟಲಿಯ ಟ್ರಿವಿ ಫೌಟೆಂನ್.
ಇದೇ ಇಟಲಿಯ ಕೊಲೋಸಿಯಂ.
ಫೇಮಸ್ ಪ್ಯಾರೀಸ್‌ನ ಐಫಲ್ ಟವರ್.
ಮುಂಬೈನ ಗೇಟ್ ವೇ ಆಫ್ ಇಂಡಿಯಾ.
ಮೆಕ್ಸಿಕೋ ನಗರದ ಝೋಕಲೋ‌.
ಸೌದಿಯಾ ಅಲ್ ಮಜಿದ್‌ನಬವಿ‌.
ಬ್ರೆಜಿಲ್‌ನ ಪಾರ್ಕ್. ( ಇಬ್ರಿಪುರಾ)
ಪ್ಯಾರಿಸ್‌ನ ಮ್ಯೂಸಿಯಂ (ಲೋವ್ರೆ)
ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್.
ಫ್ರಾನ್ಸ್ ನ ಪ್ರಸಿದ್ದ ಡಿಸ್ನಿಲ್ಯಾಂಡ್.
ಫ್ಲೋರಿಡಾದ ವಾಲ್ಟ್ ಡಿಸ್ನಿವರ್ಲ್ಡ್ ರೆಸಾರ್ಟ್.
ಮೆಕ್ಸಿಕೋ ಬಾಸ್ಕ್ ಡಿ ಚಾಪಲ್ಟೆಪಕ್.
ದೆಹಲಿಯ ಇಂಡಿಯಾ ಗೇಟ್.
ನಮ್ಮ ಹೆಮ್ಮೆಯ ಮೈಸೂರು ಅರಮನೆ.
ದುಬೈನ ಬೃಹತ್ ಮಾಲ್.
ಪ್ರೇಮಿಗಳ ಸೌಧ ತಾಜ್‌ಮಹಲ್.
ಕೊಲ್ಕತ್ತಾದ ಮೈದಾನ
ಫ್ಲೋರಿಡಾದ ಕಿಂಗ್ ಡಮ್ ಪಾರ್ಕ್.
ನ್ಯೂಯಾರ್ಕ್ ‌ನ ಟೈಮ್ಸ್ ಸ್ಕೇರ್ ‌ನ್ನ ಜನರು ಹೆಚ್ಚು ಹೆಚ್ಚು ಸರ್ಚ್ ಮಾಡಿದ್ದಾರೆ.


ಇನ್ನು ನನ್ನೂರು ಮೈಸೂರು ಜೊತೆ ಮಾತಾನಾಡಿದ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರು. ಪ್ರತಿ ವರ್ಷ ನಮಗೆ 60 ಲಕ್ಷಕ್ಕು ಹೆಚ್ಚು ಜನರು ಅರಮನೆಗೆ ಭೇಟಿ ಕೊಡುತ್ತಾರೆ. ಇಲ್ಲಿನ ಸೌಂದರ್ಯ ಸವಿದು ಹೋಗುತ್ತಾರೆ. ಜೊತೆಯಲ್ಲಿ ನಮ್ಮ ಪರಂಪರೆ, ಆಚರಣೆ, ಯುದ್ಧದ ಸಾಮಗ್ರಿ, ಚಿತ್ರಕಲೆ ಕಂಡು ಸಂತಸಗೊಳ್ಳುತ್ತಾರೆ. ಅದರಂತೆ ಇವತ್ತು ಪ್ರಪಂಚದಲ್ಲೇ ಮತ್ತೇ ಹೆಚ್ಚು ಜನರಿಗೆ ಮೈಸೂರು ತಲುಪಿತ್ತಿರೋದು ಸಂತಸ. ಜೊತೆಗೆ ಗೂಗಲ್ ವೀಕ್ಷಣೆಯಲ್ಲಿ ಸ್ಥಾನ ಬಂದಿರೋದು ಸಂತಸದ ವಿಚಾರ ಎಂದಿದ್ದಾರೆ. ಒಟ್ಟಾರೆ ನಮ್ಮ ಮೈಸೂರು ವಿಶ್ವದಲ್ಲಿ ಮತ್ತೇ ಮತ್ತೇ ಸುದ್ದಿಯಾಗಿ ಮತ್ತಷ್ಟು ಜಗಮಗಿಸಲಿ ಅನ್ನೋದೇ ನಮ್ಮ ಆಶಯ.

ಧನ್ಯವಾದಗಳು..

ನನ್ನೂರು ಮೈಸೂರು ಟೀಂ..

About Author

Leave a Reply

Your email address will not be published. Required fields are marked *