ಮೈಸೂರಿನಲ್ಲಿಂದು 1,759 ಕೊರೊನಾ ಪಾಸಿಟಿವ್ ಕೇಸ್ ಪತ್ತೆ
1 min readಮೈಸೂರು: ಮೈಸೂರಿನಲ್ಲಿಂದು 1,759 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸದ್ಯ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 72,056ಕ್ಕೆ ಏರಿಕೆಯಾಗಿದೆ.
ಇಂದು 882 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಮೈಸೂರಿನಲ್ಲಿ ಇದುವರೆಗೂ 62,762 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇದೀಗಾ ಸಕ್ರಿಯ ಪ್ರಕರಣಗಳ ಸಂಖ್ಯೆ 8,114ಕ್ಕೆ ಏರಿಕೆಯಾಗಿದ್ದು ಇಂದು ಒಂದೇ ದಿನ ಮೈಸೂರಿನಲ್ಲಿ 11 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ವರೆಗು ಮೈಸೂರಿನಲ್ಲಿ 1180 ಮಂದಿ ಸೋಂಕಿತರು ಕರೋನಾಗೆ ಬಲಿಯಾಗಿದ್ದಾರೆ.