ಮೆಡಿಕಲ್ ತ್ಯಾಜ್ಯ ಸುಡುತ್ತಿದ್ದ KVC ಆಸ್ಪತ್ರೆಗೆ 25,000 ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ
1 min readಮೈಸೂರು: KVC ಆಸ್ಪತ್ರೆಯವರು ಮೆಡಿಕಲ್ ತ್ಯಾಜ್ಯವನ್ನು ಪ್ರೀಮಿಯರ್ ಅಪಾರ್ಟ್ಮೆಂಟ್ ಬಳಿ ಸುಡುತ್ತಿದ್ದವರ ವಿರುದ್ಧ ಮೈಸೂರು ಪಾಲಿಕೆ ಸಮರ ಸಾರಿದೆ. ಈ ಬಗ್ಗೆ ನಿಖರವಾದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕರಾದ ರಾಜೇಶ್ವರಿ ಬಾಯಿ ನೇತೃತ್ವದ ತಂಡ ತಕ್ಷಣವೇ ಸ್ಥಳಕ್ಕೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ವೇಳೆ ತಾಜ್ಯ ಸುಡುತ್ತಿರುವುದು ಕಂಡು ಸ್ಥಳದಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸಂಬಂಧಪಟ್ಟವರ ವಿರುದ್ಧ ಎಚ್ಚರಿಕೆ ನೀಡಿ ರೂ. 25,000 ದಂಡ ವಿಧಿಸಿದ್ದಾರೆ. ಅಲ್ಲದೆ ಈಗಾಗಲೇ ಮೈಸೂರು ಸ್ವಚ್ಛ ನಗರಿ ಎನಿಸಿಕೊಂಡಿದೆ. ಇದಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದೆ.