ಸಂಸದ ಪ್ರತಾಪ್ ಸಿಂಹ ನನ್ನ ಚಿಕ್ಕ ತಮ್ಮ- ರಾಮದಾಸ್!
1 min readಮೈಸೂರು : ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ವಿಚಾರವಾಗಿ ಯಾರ ಜೊತೆಯು ನಾನು ಸಂಘರ್ಷ ಮಾಡಲ್ಲ. ನಿಮಗೆ ಕೈಮುಗಿದು ಕೇಳುತ್ತೇನೆ. ಈ ಯೋಜನೆ ಬಗ್ಗೆ ನಾನು ಪಾಸಿಟಿವ್ ಆಗಿದ್ದು, ಯಾವಾಗ ಕರೆದರು ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಶಾಸಕ ರಾಮದಾಸ್ ಹೇಳಿದ್ದಾರೆ. ನಾನು ಈ ಯೋಜನೆಯನ್ನ ಬೇಡ ಎಂದು ಎಲ್ಲು ಹೇಳಿಲ್ಲ. ನಾನು ಆ ಯೋಜನೆ ಬಗ್ಗೆ ಪಾಸಿಟಿವ್ ಆಗಿದ್ದೇನೆ. ಇದಕ್ಕೆ ಹೆಚ್ಚಿನ ದಾಗಿ ನಾನು ಸಂಬಂಧಿಸಿದಂತೆ ಉತ್ತರ ಕೊಡೊಲ್ಲ. ಆದರೆ ಮೈಸೂರು ಮಹಾನಗರದ ಜನರ ಋಣ ತೀರಿಸಬೇಕಿದೆ. ಚಿಂತನೆ ನಡೆಸಿ ಈ ಬಗ್ಗೆ ಯೋಜನೆ ರೂಪಿಸಬೇಕು ಎಂದಿದ್ದಾರೆ.
ಅಧ್ಯಕ್ಷರು ಕರೆದರೆ ನಾನು ಹೋಗುವೇ’
ನಾವು ಮಕ್ಕಳಿದಂತೆ ರಾಜ್ಯಾಧ್ಯಕ್ಷರು ನಮ್ಮ ತಂದೆಯಿದ್ದಂತೆ. ಮನೆಯಲ್ಲಿ ಅಣ್ಣ ತಮ್ಮರ ಮಧ್ಯೆ ಸಣ್ಣ ಗೊಂದಲ ಇರುತ್ತೆ. ಅದನ್ನ ನಿವಾರಣೆಯನ್ನ ರಾಜ್ಯಾಧ್ಯಕ್ಷರು ಮಾಡುತ್ತಾರೆ. ಆದರೆ ನಮ್ಮನ್ನ ಯಾವುದೇ ಕಾರಣಕ್ಕು ರಾಜ್ಯಾಧ್ಯಕ್ಷರು ಕರೆದಿಲ್ಲ. ಸಂಸದ ಪ್ರತಾಪ್ ಸಿಂಹ ಕೂಡ ನನ್ನ ಚಿಕ್ಕ ತಮ್ಮನಿದ್ದಂತೆ ಎಂದರು.
ನನಗೆ ಮಂತ್ರಿ ಮಾಡಿದರೆ ರಾಜ್ಯ ಸುತ್ತುವೆ!
ನನಗೆ ಕರೆದರೆ ಮಾತ್ರ ನಾನು ಊಟಕ್ಕೆ ಹೋಗುತ್ತೇನೆ. ಸುಮ್ಮನ್ನೆ ಹೋಗೋದಿಲ್ಲ, ಸದ್ಯ ನನ್ನ ಸರದಿ ಇನ್ನು ಬಂದಿಲ್ಲ. ಏನಾದರು ಸಚಿವ ಸ್ಥಾನ ಕೊಟ್ಟರೆ ನಾನು ರಾಜ್ಯ ಸುತ್ತಿ ಎಲ್ಲರಿಗು ಒಳಿತನ್ನ ಮಾಡುವೆ ಎಂದರು. ಸಚಿವ ಸಂಪುಟ ವಿಸ್ತರಣೆ ಮಾಡೋದು ಸಿಎಂಗೆ ಬಿಟ್ಟದ್ದು ಎಂದರು. ರಿಜಿನಲ್ ಇನ್ಬ್ಯಾಲೆನ್ಸ್ ಆಗಬಾರದು ಎಂದು ಚಾಣಕ್ಯನೇ ಹೇಳಿದ್ದಾರೆ. ಆದರೆ ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.