ಸಿಎಂ ಹುಟ್ಟುಹಬ್ಬ’ ಮೈಸೂರಿನ ಕೆ.ಆರ್.ಕ್ಷೇತ್ರದ ಜನರಿಗೆ ಶಾಸಕ ರಾಮದಾಸ್ ಭರ್ಜರಿ ಗಿಫ್ಟ್!

1 min read

ಬೆಂಗಳೂರು – ಮೈಸೂರು : ಮುಖ್ಯಮಂತ್ರಿ ಬೊಮ್ಮಾಯಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರಿನ ಅವರ ನಿವಾಸ ಬಳಿ ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಸೂರಿಲ್ಲದವರಿಗೆ ಸೂರು ನೀಡುವ ಹಕ್ಕು ಪತ್ರ ವಿತರಣೆಯ ಉದ್ಘಾಟನೆಯನ್ನ ಸಾಂಕೇತಿಕವಾಗಿ ನೆರವೇರಿಸಿದರು. ಶಾಕಸರಾದ ರಾಮದಾಸ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ ಅವರು ರಾಮದಾಸ್ ಅವರ ಕಾರ್ಯವನ್ನ ಶ್ಲಾಘಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಬಸವರಾಜ್, ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಉಪಸ್ಥಿತರಿದ್ದರು.

  • ಸಿಎಂ ಹುಟ್ಟುಹಬ್ಬ ಕೆ.ಆರ್.ಕ್ಷೇತ್ರದ ಜನರಿಗೆ ಬಂಪರ್!

ಇನ್ನು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಹಕ್ಕು ಪತ್ರ ವಿತರಣೆಯ ಉದ್ಘಾಟನೆ ಮಾಡಿದ ಅದೇ ಸಮಯದಲ್ಲಿ ಮೈಸೂರಿನ ಕೆ.ಆರ್.ಕ್ಷೇತ್ರದ ಆಶ್ರಯ ಕಚೇರಿಯಲ್ಲು ಮಹಾಪೌರರಾದ ಶ್ರೀಮತಿ ಸುನಂದಾ ಪಾಲನೇತ್ರ, ಆಶ್ರಯ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಅರಸ್, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ನಗರಪಾಲಿಕಾ ಸದಸ್ಯರಾದ ಬಿ.ವಿ.ಮಂಜುನಾಥ್ ಹಾಗೂ ಆಶ್ರಯ ಅಧಿಕಾರಿಗಳಿಂದ ಅರ್ಹ ಫಲಾನುಭವಿಗಳಿಗೆ ತಾತ್ಕಾಲಿಕ ಮಂಜೂರಾತಿ ಪತ್ರವನ್ನ ನೀಡಿದರು. ಇಂದಿನಿಂದ ಸುಮಾರು 2,895 ಜನಕ್ಕೆ ಹಕ್ಕು ಪತ್ರವನ್ನು ನೀಡಲಾಗುತ್ತಿದ್ದು ಹಕ್ಕುಪತ್ರ ಪಡೆದ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದರು.

ಅಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷದ ಸುಸಂದರ್ಭದಲ್ಲಿ ಎಲ್ಲರಿಗೂ ಸ್ವಂತ ಸೂರು ಕೊಡಬೇಕೆಂಬ ಪ್ರಧಾನಿ ಮೋದಿಯವರ ಇಚ್ಛೆಯಂತೆ ನಮ್ಮ ಕೆ.ಆರ್. ಕ್ಷೇತ್ರದಲ್ಲೂ ಸಹ 81 ಸಾವಿರ ಮನೆಗಳ ಸರ್ವೇಯನ್ನು ಸಹ ಮಾಡಿದ್ದೆವು ಅದರಲ್ಲಿ ನಮಗೆ 24 ಸಾವಿರ ಅರ್ಜಿಗಳು ಸ್ವಂತ ಮನೆ ಬೇಕೆಂದು ಹಾಕಿದ್ದರು.

24 ಸಾವಿರ ಅರ್ಜಿಗಳಲ್ಲಿ 12 ಸಾವಿರ ಅರ್ಜಿಗಳು ತಿರಸ್ಕೃತಗೊಂಡು ಇನ್ನುಳಿದ 12 ಸಾವಿರ ಅರ್ಜಿಗಳು ಈಗ ಆಯ್ಕೆಯಾಗಿವೆ. ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿ ಅಡಿಯಲ್ಲಿ ಆಯೋಜನೆ ಆದಂತಹ ಫಲಾನುಭವಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 25.01.2022 ರ ಮಂಗಳವಾರ ಮಾಡಿದೆವು. ಮುಂದಿನ ಒಂದು ವರ್ಷದೊಳಗೆ ಯಾರು ಅರ್ಹರಿದ್ದಾರೆ, ಯಾರಿಗೆ ಅವಶ್ಯಕತೆ ಇದೆ ಎಂದು ತಿಳಿದುಕೊಂಡು ಅಂತಹವರಿಗೆ ಮನೆಯನ್ನು ನೀಡಬೇಕು ಎಂದು ಯೋಜನೆಯನ್ನ ರೂಪಿಸಿದ್ದೇವೆ.

-ಕೆ.ಆರ್ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ನಡೆದ ಮೋದಿಯುಗೋತ್ಸವದಲ್ಲಿ ಹಲವಾರು ಯೋಜನೆಗಳಿಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಮಾನ್ಯ ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಸೋಮಣ್ಣ ಅವರು 2,012 ಆಶ್ರಯ ಮನೆಗಳಿಗೆ ಭೂಮಿ ಪೂಜೆ ಮಾಡಿ ಚಾಲನೆಯನ್ನು ನೀಡಿದರು. ಇನ್ನು 2,985 ಮನೆಗಳಿಗೆ ಈಗಾಗಲೇ ಸಮ್ಮತಿಯನ್ನು ನೀಡಿ ಟೆಂಡರ್ ಅನ್ನು ಕರೆಯುವ ಹಂತದಲ್ಲಿದೆ.

  • ಉಳಿದಂತಹ ಮನೆಗಳನ್ನು ಕೆ.ಆರ್.ಕ್ಷೇತ್ರದಲ್ಲಿ ನೀಡಲು ನೀಡಲು ಭೂಮಿಯನ್ನು ತೆಗೆದು ಇಡಲಾಗಿದ್ದೇವೆ. ಒಟ್ಟು 6 ಸಾವಿರ ಮನೆಗಳು ಮಂಜೂರಾಗಿದ್ದು, ಇಂದಿನಿಂದ ಕ್ಷೇತ್ರದಲ್ಲಿ ಸುಮಾರು 2,895 ಹಕ್ಕುಪತ್ರಗಳನ್ನು ಕೊಡಲು ಚಾಲನೆ ನೀಡಲಾಗಿದೆ.
  • ಇನ್ನು 6 ಸಾವಿರ ಮನೆಗಳಿಗಾಗಿ ಮಂಜೂರಾತಿಯನ್ನು ನೀಡಬೇಕೆಂದು ಈಗಾಗಲೇ ವಸತಿ ಸಚಿವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕೊಟ್ಟಿದ್ದೇವೆ. ಈ ವಿಷಯವಾಗಿ ಮಾನ್ಯ ವಸತಿ ಸಚಿವರಾದ ವಿ.ಸೋಮಣ್ಣ ಅವರಿಗೆ ಅಭಿನಂದನೆಯನ್ನ ಶಾಸಕರಾದ ಎಸ್.ಎ.ರಾಮದಾಸ್ ಅವರು ಸಲ್ಲಿಸಿದರು.

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ 18 ಲಕ್ಷ ಮನೆಗಳನ್ನು ಮಂಜೂರು ಮಾಡಿರುವುದು ಅತ್ಯಂತ ಖುಶಿಯ ಸಂಗತಿ. ಸದರಿ 18 ಲಕ್ಷ ಮನೆಗಳಲ್ಲಿ ನಮ್ಮ ಕ್ಷೇತ್ರಕ್ಕೆ 6 ಸಾವಿರ ಮನೆಗಳನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿ ಕೊಡಬೇಕೆಂದು ಸಹ ವಿನಂತಿಸಿದ್ದಾರೆ.

About Author

Leave a Reply

Your email address will not be published. Required fields are marked *