ಕಡಿಮೆ ಇದ್ದಾಗ ಸ್ಕೂಲ್ ಕ್ಲೋಸ್’ ಹೆಚ್ಚಾದಾಗ ಶಾಲೆ ಓಪನ್!
1 min readಮೈಸೂರು ಜಿಲ್ಲಾಢಳಿತದ ಆದೇಶ ಗೊಂದಲ ಉಂಟುಮಾಡುತ್ತಿದ್ದು, ಕೊರೊನ ಸೋಂಕು ಹೆಚ್ಚುತ್ತಿರುವ ಸಮಯದಲ್ಲೇ ಶಾಲೆಗಳ ಪುನರಾರಂಭಕ್ಕೆ ಸೂಚನೆ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವಿಟಿ ರೇಟ್ 52% ಇದ್ದರೂ ಶಾಲೆಗಳ ಪುನರಾರಂಭಕ್ಕೆ ಆದೇಶ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಲಾ ಕಾಲೇಜು ತಾತ್ಕಾಲಿಕ ಬಂದ್ ಮಾಡುವಂತೆ ಶಾಸಕರುಗಳು ಒತ್ತಾಯಿಸಿದ್ದರು. ಇತ್ತ ಆದೇಶ ಹೊರಡಿಸಿ ತಾತ್ಕಾಲಿಕ ಸ್ಥಗಿತವಾಗಿದ್ದ 1ರಿಂದ9 ತರಗತಿಗಳ ಪುನರಾರಂಭವಾಗಿದೆ. ಒಂದೆಡೆ ಪೋಷಕರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕವಾಗಿದ್ದರೆ, ಇತ್ತ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಸ್ಪೋಟಗೊಳ್ಳುತ್ತಿದೆ. ಈಗಾಗಲೇ ಕಳೆದ ಎರಡು ದಿನದಿಂದ 4 ಸಾವಿರಕ್ಕು ಹೆಚ್ಚು ಕೇಸ್ ದಾಖಲಾಗಿದ್ದು, 16 ಸಾವಿರಕ್ಕು ಅಧಿಕ ಆಕ್ಟೀವ್ ಕೇಸ್ ಇದೆ.
ಜಿಲ್ಲೆಯ ಪಾಸಿಟಿವಿಟಿ ರೇಟ್ ಜಾಸ್ತಿ ಇರುವಾಗ ಶಾಲೆ ಪುನರಾರಂಭಿಸಬೇಕಿತ್ತಾ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದು, ಇಡೀ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ನೀಡಬೇಕು ಎಂದು ಒತ್ತಾಯಿಸಿದ್ದ ಶಾಸಕ ಡಾ. ಯತೀಂದ್ರ ಹಾಗೂ ಹೆಚ್.ಪಿ ಮಂಜುನಾಥ್ ಒತ್ತಾಯಿಸಿದ್ರು. ಅಲ್ಲದೆ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಉಸ್ತುವಾರಿ ಸಚಿವ ಸೋಮಶೇಖರ್ ಕೂಡ ಭರವಸೆ ನೀಡಿದ್ರು. ಆದ್ರೆ ಈಗ
ಈ ನಡುವೆಯೇ ಶಾಲಗಳೆ ಪುನರಾರಂಭವಾಗಿರೋದು ಸಾಕಷ್ಟು ಆತಂಕ ಸೃಷ್ಟಿಸಿದೆ.