85ರ ಅಜ್ಜನಿಗು’ 65ರ ಅಜ್ಜಿಗು ಮದುವೆ!
1 min readಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ, ಅಜ್ಜಿ. ಇಳಿ ವಯಸ್ಸಿನಲ್ಲಿ ಮದುವೆಯಾಗಿ ಅಚ್ಚರಿ ಮೂಡಿಸಿದ ಅಜ್ಜ ಅಜ್ಜಿ. ಫಾತಿಮಾ ಬೇಗಂ ಕೈ ಹಿಡಿದ ಮುಸ್ತಫಾ. ಆತನಿಗೆ 85 ವರ್ಷ, ಆಕೆಗೆ 65 ವರ್ಷ. ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ಸತಿಪತಿಗಳಾದ ವೃದ್ಧರು.
ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆಯಾದ ಅಜ್ಜ ಅಜ್ಜಿ. ಗೌಸಿಯಾನಗರದ ಹಾಜಿ ಮುಸ್ತಫಾ(85) ಹಾಗೂ ಫಾತಿಮಾ ಬೇಗಂ(65) ಸತಪತಿಗಳಾದ ಜೋಡಿ. ಕುರಿ ಸಾಕಾಣಿಕೆ ಮಾಡಿ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ. ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನ ಕಳೆದುಕೊಂಡಿದ್ದ ಮುಸ್ತಫಾ. ಮಕ್ಕಳಿಗೆಲ್ಲಾ ಮದುವೆ ಮಾಡಿದ್ದರಿಂದ ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದ ಮುಸ್ತಫಾ.
ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ಅಜ್ಜ. ಮುಸ್ತಫಾ ಕಣ್ಣಿಗೆ ಬಿದ್ದಳು ಅದೇ ಏರಿಯಾದ ಫಾತಿಮಾ ಬೇಗಂ. ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ. ಫಾತಿಮಾ ಬೇಗಂರನ್ನ ಮದುವೆಯಾಗಲು ಮನವಿ ಮಾಡಿದ್ದ ಮುಸ್ತಫಾ. ಮುಸ್ತಫಾನಿಗೆ ನಿರಾಸೆ ಮಾಡದೆ ಮದುವೆಯಾಗಲು ಒಪ್ಪಿದ್ರು ಫಾತಿಮಾ ಬೇಗಂ. ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಚಿಸಿದ ತಂದೆಗೆ ಶುಭ ಹಾರೈಸಿದ ಮಕ್ಕಳು.
ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರಕ್ಕೆ ಜೈ ಎಂದು ನಿಖಾ ಮಾಡಿದ ಮಕ್ಕಳು. ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾಬೇಗಂರನ್ನ ವರಿಸಿದ ಮುಸ್ತಫಾ. ಇಳಿ ವಯಸ್ಸಿನಲ್ಲಿ ಆಸರೆ ಬಯಸಿದ ಮುಸ್ತಫಾರ ಆಸೆ ಈಡೇರಿಸಿದ ಫಾತಿಮಾ ಬೇಗಂ. ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ ಅಜ್ಜಿ ಫುಲ್ಖುಷ್.