ಸಹಾಯ ಮಾಡುವುದಾಗಿ ಹೇಳಿ ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

1 min read

ಮೈಸೂರು,ಜ.22-ಎಟಿಎಂಗಳ ಬಳಿ ಸಹಾಯ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಆರ್.ನಗರ ಪೊಲೀಸರು ಬಂಧಿಸಿದ್ದಾರೆ‌.
ಎಟಿಎಂ ಕೇಂದ್ರಗಳ ಬಳಿ ಸಾರ್ವಜನಿಕರಿಗೆ ಹಾಗೂ ವಯಸ್ಸಾದವರಿಗೆ ಸಹಾಯ ಮಾಡುವ ನೆಪದಲ್ಲಿ ಮೋಸದಿಂದ ಎಟಿಎಂ ಕಾರ್ಡ್ ಗಳನ್ನು ಬದಲಾಯಿಸಿ ಪಿನ್ ನಂಬರ್ ಗಳನ್ನು ತಿಳಿದುಕೊಂಡು ಎಟಿಎಂ ಕಾರ್ಡ್ ಗಳಿಂದ ಹಣವನ್ನು ಡ್ರಾ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ತಮ್ಮ ಠಾಣೆಯಲ್ಲಿ ಎ.ಟಿ.ಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿ ವಂಚನೆ ಮಾಡಿರುವ ಪ್ರಕರಣಗಳು ವರದಿಯಾಗಿದ್ದಲ್ಲಿ ಕೆ.ಆರದ.ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
ಕೆಆರ್ ನಗರ ಪೊಲೀಸ್ ಠಾಣೆ ದೂ.ಸಂ. 08223263666, ಜಿಲ್ಲಾ ನಿಸ್ತಂತು ಘಟಕ 0821-2444800.

About Author

Leave a Reply

Your email address will not be published. Required fields are marked *