ಸಚಿವ ಸ್ಥಾನ ಉಳಿಸಿಕೊಳ್ಳುವುದಕ್ಕೆ ನೀರಾಣಿ ಪೀಠ ಮಾಡ್ತಿದ್ದಾರೆ: ವಿಜಯಾನಂದ ಕಾಶಪ್ಪ
1 min readಬೆಂಗಳೂರು,ಜ.22-ಮುರುಗೇಶ್ ನಿರಾಣಿಯವರು ಸಚಿವ ಸ್ಥಾನ ಉಳಿಸಿಕೊಳ್ಳೋಕೆ ಪೀಠ ಮಾಡ್ತಿದ್ದಾರೆ ಎಂದು ಪಂಚಮಸಾಲಿ ನಾಯಕ ವಿಜಯಾನಂದ ಕಾಶಪ್ಪ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ರಾಜಕೀಯ ಭವಿಷ್ಯ ಉಳಿವಿಗೆ ಈ ಪ್ರಯತ್ನ .ಸಮಾಜ ಮೊದಲು ಎಲ್ಲಿತ್ತು? ಸಮಾಜ ಕಟ್ಟಿದವರು ಯಾರು? ಸಮಾಜ ಕಟ್ಟಿದವರು ಮೊದಲು ನಮ್ಮ ತಂದೆ ಕಾಶಪ್ಪವರು ಸ್ವಾರ್ಥಕ್ಕಾಗಿ ಪೀಠ ಬಳಸಿಕೊಳ್ತಿದ್ದಾರೆ. ಮೊದಲು ಕೂಡಲಸಂಗಮ ಪೀಠ ಬಳಸಿಕೊಂಡ್ರು ನಂತರ ವಚನಾನಂದರನ್ನ ಬಳಸಿಕೊಂಡ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯವರಾದ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಈಗಾಗಲೇ ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ್ದೇವೆ. ವಚನಾನಂದ ಶ್ರೀಗಳು ಅದಕ್ಕೆ ಬಂದು ಹೋದ್ರು ಮೂರನೇ ಪೀಠಕ್ಕೆ ಇಬ್ಬರು ಶ್ರೀ ಸಮ್ಮತಿ ಇದೆ ಎಂದಿದ್ದಾರೆ. ಮೂರನೇ ಪೀಠ ನಿರಾಣಿಯವರದ್ದು ಅವರನ್ನ ಮಂತ್ರಿಮಂಡಲದಿಂದ ಕೈಬಿಡ್ತಿದ್ದಾರೆ
ಇವರು ಸಚಿವರಾಗೋಕೆ ಜಯ ಮೃತ್ಯುಂಜಯ ಶ್ರೀ ಬೇಕು
ವಚನಾನಂದ ಶ್ರೀಗಳು ಬೇಕು. ಆದರೆ ಈಗ ಅವರ ವಿರುದ್ಧವೇ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹರಿಹರದಲ್ಲಿ ಸಂಘ ಕಟ್ಟಿದ್ದು ನಮ್ಮ ತಂದೆಯವರು. ಹಣ ಹೊಡೆಯೋಕೆ ಅದನ್ನ ಬಳಸಿಕೊಂಡಿದ್ದು ನಿರಾಣಿ. ಸಿಎಂ ಆಗಬೇಕೆಂಬ ಕಾರಣಕ್ಕೆ ಪೀಠ ಕಟ್ತಿದ್ದಾರೆ. ಅವರ ಸಹೋದರನ್ನ ಮಂತ್ರಿ ಮಾಡಬೇಕು ಅದಕ್ಕಾಗಿಯೇ ನಿರಾಣಿ ಒದ್ದಾಡ್ತಿದ್ದಾರೆ
ನಿರಾಣಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
೨೦೦೮ ರಿಂದ ನಮ್ಮಜಗದ್ಗುರುಗಳು ಇದ್ದಾರೆ. ಜಯಮೃತ್ಯುಂಜಯಶ್ರೀಗಳು ಇದ್ದಾರೆ. ಸಮುದಾಯ ಒಗ್ಗೂಡಿಸುವ ಕೆಲಸ ಮಾಡ್ತಿದ್ದಾರೆ. 2-ಎ ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ಸಮಾಜಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ತಾರೆ. ಸ್ವಾರ್ಥಕ್ಕಾಗಿ ಸಮಾಜ ಬಳಕೆ ಮಾಡಿಕೊಳ್ತಿದ್ದಾರೆ. ಮೂರನೇ ಪೀಠ ಮಾಡಲುಹೊರಟಿದ್ದಾರೆ. ಸಮಾಜದಲ್ಲಿ ಯಾವುದೇ ಒಡಕಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸಮಾಜಕ್ಕೆ ನಿರಾಣಿ ಕೊಡುಗೆಯೇನು ವೈಯುಕ್ತಿಕ ಸ್ವಾರ್ಥಕ್ಕಾಗಿ ಈ ಪ್ರಯತ್ನ. ತಮಗೆ ಬೇಕಾದಂತೆ ಸಮಾಜ ಬಳಸಿಕೊಳ್ತಾರೆ. ಸಮಾಜ ಅವರ ಹಿಂದೆ ಇಲ್ಲ ಎಂದು ಕಿಡಿಕಾರಿದರು.