ಕಾಡ ಕಚೇರಿ ಮುಂದೆ ರೈತರ ಪ್ರತಿಭಟನೆ- ಕಾರ್ಖಾನೆಗು ಬಿಸಿ ಮುಟ್ಟಿಸಿದ ರೈತರ!

1 min read

ಕಬಿನಿ ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ಬೇಸಿಗೆಯಲ್ಲಿ ಕೆರೆಕಟ್ಟೆ ತುಂಬಿಸಲು ದನಕರುಗಳಿಗೆ ಕುಡಿಯಲು ಹಾಗೂ ಮೇವು ಬೆಳೆಯಲು ನೀರು ಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಕಾಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಬ್ಬರು ಬೆಳೆಗಾರರ ಸಂಘದ ರೈತರು, ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಈ ವೇಳೆ‌ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕಬಿನಿ ಹಾಗೂ ಕಾವೇರಿ ಜಲಾಶಯಗಳು ಉತ್ತಮ ಮಳೆಯಾಗಿರುವ ಕಾರಣ ಹೆಚ್ಚಿನ ನೀರಿನ ಸಂಗ್ರಹ ದಾಸ್ತಾನು ಇರುತ್ತದೆ. ಈ ಅಚ್ಚುಕಟ್ಟು ಭಾಗದ ರೈತರು ಅತಿಯಾದ ಮಳೆಯಿಂದ ಮುಂಗಾರಿನಲ್ಲಿ ಭತ್ತದ ಇಳುವರಿ ಶೇಕಡಾ 40ರಷ್ಟು ಕಡಿಮೆ ಬಂದಿರುವ ಕಾರಣ ತೀವ್ರ ನಷ್ಟ ಅನುಭವಿಸಿದ್ದಾರೆ. ಈ ಬೆಳೆ ಬೆಳೆಯಲು ಮಾಡಿದ್ದ ಸಾಲ ವೈಗೈರೆಗಳನ್ನು ತೀರಿಸಲು ಕಷ್ಟಸಾಧ್ಯವಾಗಿದೆ ಅಚ್ಚುಕಟ್ಟು ಭಾಗದ ಕೆರೆ ಕಟ್ಟೆಗಳು ಒಣಗುತ್ತಿವೆ.

  • ಬೆಳೆದು ನಿಂತಿರುವ ಕಬ್ಬು ಬಾಳೆ ಬೆಳೆಗಳಿಗೆ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲು ಕಷ್ಟವಾಗುತಿದೆ. ದನಕರುಗಳಿಗೆ ಮೇವು ಬೆಳೆಸಲು ಕಷ್ಟವಾಗಿದೆ ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಕಬಿನಿ ಅಚ್ಚುಕಟ್ಟು ಜಲಾಶಯದ ಎಲ್ಲಾ ಕಾಲುವೆಗಳಿಗೆ ಫೆಬ್ರವರಿ ಮೊದಲ ವಾರದಿಂದ ನೀರು ಹರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ವಾರಬಂದಿ ರೂಪದಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಚೀಫ್ ಇಂಜಿನಿಯರ್ ಪ್ರಭಾಕರ್‌ಗೆ ಮನವಿ ಸಲ್ಲಿಕೆ.!

ಇದಕ್ಕೆ ಸಂಬಂಧಪಟ್ಟವರ ಜೊತೆ ಮಾತನಾಡಿ ಹಿರಿಯ ಅಧಿಕಾರಿ ಕ್ರಮಕೈಗೊಳ್ಳುವ ಭರವಸೆ ನೀಡಿದರು‌. ಸ್ಥಳದಲ್ಲೇ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರರಿಗೆ ದೂರವಾಣಿ ಮುಖಾಂತರ ಮಾತನಾಡಿ ಫೆ. 10ರ ಒಳಗಾಗಿ ನೀರು ಹರಿಸುವುದಾಗಿ ಭರವಸೆ ನೀಡಿದರು ನಂತರ ಜಿಲ್ಲಾಧಿಕಾರಿ ಕಚೇರಿ ತೆರಳಿ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಯೋಜನೆ ಅಡಿ ಬತ್ತ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು, ಖರೀದಿ ಕೇಂದ್ರಗಳಲ್ಲಿ ಸಣ್ಣ-ದೊಡ್ಡ ರೈತರು ಎಂದು ಇಭಾಗ ಮಾಡಿ ದ್ರೋಹ ಬಗೆಯುತ್ತಿದೆ, ರೈತರಿಗೆ ಖರೀದಿ ಕೇಂದ್ರಗಳಿಂದ ಅನುಕೂಲವಾಗದ, ನಿಯಮಗಳನ್ನು ಜಾರಿಗೆ ತಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಕೇವಲ 10 ಕ್ಕಿಂಟಾಲ ರಾಗಿ 40 ಕುಂಟಲ್ ಭತ್ತ ಸಣ್ಣ ರೈತರಿಂದ ಮಾತ್ರ ಖರೀದಿಸಬೇಕು ಎಂಬ ನಿಯಮವನ್ನು ರದ್ದುಗೊಳಿಸಬೇಕು.

  • ಎಲ್ಲಾ ರೈತರಿಂದಲು ಕನಿಷ್ಠ 100 ಕುಂಟಾಲ್ ಬತ್ತ 20 ಕುಂಟಲ್ ರಾಗಿ ಖರೀದಿಸುವ ವ್ಯವಸ್ಥೆ ಜಾರಿಗೆ ಬರಬೇಕು ರಾಜ್ಯದ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಹೆಚ್ಚು ಖರೀದಿ ಕೇಂದ್ರಗಳನ್ನು ತೆರೆಯಲು ಖರಿದಿಸಲು ಬೇಕಾದ ಅನುದಾನವನ್ನು ತರಲು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಯ ಒಪ್ಪಂದ ಪತ್ರ ಬದಲಿಸಿ!

ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಅಮಾಡಿರುವ ಕಬ್ಬು ಬೆಳೆಗಾರರ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಬದಲಾಯಿಸಿ, ತನಗೆ ಬೇಕಾದಂತೆ ರೈತರನ್ನು ವಂಚಿಸುವ ಒಪ್ಪಂದ ಪತ್ರ ಜಾರಿಗೊಳಿಸಿರುವ ಬಗ್ಗೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಬೇಕೆಂದು ಕಬ್ಬು ಅಭಿವೃದ್ಧಿ ಆಯುಕ್ತರು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಷ್ಟೇ ಇದರ ಮಾದರಿ ಒಪ್ಪಂದ ಪತ್ರವನ್ನು ಲಗತ್ತಿಸಿದ್ದೇವೆ ನಿಮಗೆ ನಾವು ಜಿಲ್ಲಾಧಿಕಾರಿಗಳು ಕರೆದಿದ್ದ ಹಲವಾರು ಸಭೆಗಳಲ್ಲಿ ಒತ್ತಾಯಪಡಿಸಿದ ಕಾರಣ ತಾವು ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ಸೂಚನೆ ನೀಡಿ ದ್ವೀಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಿ ವರದಿ ನೀಡಬೇಕೆಂದು ಆದೇಶ ಹೊರಡಿಸಿರುವುದು ಸರಿಯಷ್ಟೇ.

-ಈ ಬಗ್ಗೆ ದೀಪಕ್ಷಿಯ ಒಪ್ಪಂದ ಪತ್ರ ಜಾರಿ ಮಾಡಿದ್ದೇವೆ ಎಂದು ಹೇಳುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಒಪ್ಪಂದ ಪತ್ರದ ಬಹುತೇಕ ಕರಾರುಗಳನ್ನು ತಿದ್ದುಪಡಿ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಕೂಡಲೇ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಜಾರಿಗೊಳಿಸಿರುವ ಒಪ್ಪಂದ ಪತ್ರವನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಸೂಚಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಕಟಾವು ಬಿಲ್ ದಾಖಲಿಸಿ!

  • ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಸರಬರಾಜು ಮಾಡಿದ ರೈತರ ಬಿಲ್ಲುಗಳಲ್ಲಿ ಸರ್ಕಾರ ನಿಗದಿ ಮಾಡಿದ ಕಟಾವು ಸಾಗಾಣಿಕೆ ದರ ಬಿಲ್ಲಿನಲ್ಲಿ ನೊಂದಾಯಿಸಿ ನಂತರ ಇದಕ್ಕಿಂತ ಹೆಚ್ಚುವರಿ ಹಣವನ್ನು ಕಬ್ಬು ಸರಬರಾಜು ಮಾಡಿದ ರೈತರಿಂದ ಕಾರ್ಖಾನೆ ಫೀಲ್ಡ್ಮನ್ ಗಳು ವಸೂಲಿ ಮಾಡುತ್ತಿದ್ದಾರೆ. ರೈತರು ಪ್ರಶ್ನೆ ಮಾಡಿದರೆ ಕಟಾವು ಕೂಲಿಕಾರರ ಸಲುವಾಗಿ ಎಂದು ಉತ್ತರಿಸುತ್ತಿದ್ದಾರೆ. ಹೆಚ್ಚುವರಿ ಹಣ ಪಡೆದ ಬಗ್ಗೆ ಬಿಲ್ಲಿನಲ್ಲಿ ನೋಂದಾಯಿಸಬೇಕು ಎಂದು ಕೋರಿದರು. ಅದಕ್ಕೆ ಕಾರ್ಖಾನೆಯವರು ಒಪ್ಪುತ್ತಿಲ್ಲ ಆದ್ದರಿಂದ ತಾವು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಕಾರ್ಖಾನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ರೈತರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ತಂತ್ರಗಾರಿಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಿಯೋಗದಲ್ಲಿ ಹತ್ತಳ್ಳಿ ದೇವರಾಜ್, ಕಿರಗಸೂರ್ ಶಂಕರ, ಕೂಡನಹಳ್ಳಿ ರಾಜಣ್ಣ, ಕುರುಬೂರು ಸಿದ್ದೇಶ್, ಬರಡನಪುರ ನಾಗರಾಜ್, ಪಿ ರಾಜು, ಕಾಟೂರ ಮಹದೇವಸ್ವಾಮಿ, ಶಿವರುದ್ರಪ್ಪ, ರಂಗರಾಜು, ಸಾತಗಳ್ಳಿ ಬಸವರಾಜ್, ಗೌರಿಶಂಕರ, ಬನ್ನೂರು ಕೃಷ್ಣಪ್ಪ, ಬಿ ಪಿ ಪರಶಿವಮೂರ್ತಿ, ರಾಜೇಂದ್ರ ,ರೇವಣ್ಣ, ಪೈಲ್ವಾನ್ ವೆಂಕಟೇಶ್ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *