ಹೊಸ ಶಿಕ್ಷಣ ನೀತಿ ಮೂಲಕ ಸೇವಾ ವಿಲೀನತೆ ಮಾಡಿ: ಎಂಎಲ್ ಸಿ ಶ್ರೀಕಂಠೇಗೌಡ
1 min readಮೈಸೂರು,ಜ.18- ಹೊಸ ಶಿಕ್ಷಣ ನೀತಿ ಮೂಲಕ ಸೇವಾ ವಿಲೀನತೆ ಮಾಡಿ ಎಂದು ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಅವರ ಅನ್ನ ಕಿತ್ತು ಇನ್ನೊಬ್ಬರಿಗೆ ನೀಡಬೇಡಿ. ವಾಸ್ತವವಾಗಿ ನಿಮಗೆ ಜನ್ಮ ಕೊಟ್ಟವರು ಶಿಕ್ಷಕರು. ಹಠಕ್ಕೆ ಬೀಳಬೇಡಿ ಸಚಿವರೇ, ಸಿಎಂ ಅವರೇ ಇತ್ತ ನೋಡಿ. 14 ಸಾವಿರ ಶಿಕ್ಷಕರಿಗೂ ನೀವೂ ಮೋಸ ಮಾಡಿದ್ದೀರಾ? ನಮಗೆ ನ್ಯಾಯ ಸಿಗುವವರೆಗೂ ಈ ಬಗ್ಗೆ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಸರ್ಕಾರದ ಈ ನಿರ್ಧಾರಕ್ಕೆ ನಾವು ಒಪ್ಪಲ್ಲ. ಜೆಓಸಿ ಅವರಿಗೂ ಸೇವಾ ವಿಲೀನತೆ ಮಾಡಿದ್ರಿ. ಅದೇ ಆಧಾರದಲ್ಲಿ ನಮ್ಮ ಅತಿಥಿ ಶಿಕ್ಷಕರಿಗೂ ಮಾಡಿ. ಮೂಗಿಗೆ ತುಪ್ಪ ಸವರುವಂತ ಆದೇಶ ಸರ್ಕಾರ ಮಾಡಿದೆ ಎಂದು ಶ್ರೀಕಂಠೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.
ಅತಿಥಿ ಉಪನ್ಯಾಸಕಿ ಶ್ರೀಜಾ ಮಾತನಾಡಿ, ಮಾನಸಿಕವಾಗಿ ನೀವು ನಮ್ಮನ್ನ ಕೊಲ್ಲುತ್ತಿದ್ದೀರಾ. ಸಂಸಾರ ನಡೆಸಲು ಆಗ್ತಿಲ್ಲ, ಎಲ್ಲರು ಹುಚ್ಚರಂತೆ ಆಗುತ್ತಿದ್ದಾರೆ. ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದೇವು, ನಮ್ಮ ಬೆನ್ನಿಗೆ ಚಾಕು ಹಾಕುವಂತ ಕೆಲಸ ಮಾಡಿದ್ದೀರಾ. ನಮಗೆ ಸ್ವಲ್ಪ ಸ್ವಲ್ಪವೇ ವಿಷ ಕೊಡುವ ಬದಲು, ಒಟ್ಟಿಗೆ ವಿಷ ಕೊಡಿ. ಹೊಡೆದು ಆಳುವ ನೀತಿ ಇಲ್ಲಿಗೆ ನಿಲ್ಲಿಸಿ. ನಿಮ್ಮ ಮುಂದೆಯೇ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಸಾಕಷ್ಟು ಶಿಕ್ಷಕರು ಮುಂದಾಗಿದ್ದಾರೆ. ನಾವು ಸಾಕಷ್ಟು ನೊಂದು ಬೆಂದು ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ. ನಾವು ಆತ್ಮಮಾಡಿಕೊಂಡರೆ ನಿಮ್ಮ ಹೆಸರನ್ನೇ ಬರೆದು ಸಾಯುತ್ತೇವೆ. ಯಾವುದೇ ಕಾರಣಕ್ಕೂ ಇದನ್ನ ಇಲ್ಲಿಗೆ ಬಿಡೋದಿಲ್ಲ. ನಮ್ಮ ಹೋರಾಟ ನಿರಂತವಾಗಿ ನಡೆಯುತ್ತೆ ಎಂದಿದ್ದಾರೆ.
ಅತಿಥಿ ಉಪನ್ಯಾಸಕಿ ನಾಗಮಣ್ಣಿ ಮಾತನಾಡಿ, ಇದೀಗಾ ಸಚಿವರಿಗೆ ಶಿಕ್ಷಕರ ಕ್ವಾಲಿಫೈಡ್ ಬಗ್ಗೆ ನೆನಪು ಆಗಿದ್ಯಾ? ನಾವೆಲ್ಲ ವೆಲ್ ಕ್ವಾಲಿಫೈಡ್ ಶಿಕ್ಷಕರು. ಬೇಕಿದ್ದರೆ ಬಂದು ಚೆಕ್ ಮಾಡಿಕೊಳ್ಳಿ ಸಚಿವರೇ.! ನಮ್ಮನ್ನ ಈಗ ಬಾಂಡಲಿಯಿಂದ ಬೆಂಕಿಗೆ ಹಾಕಿದ್ದಾರೆ. ಕೋವಿಡ್ ಸಮಯದಲ್ಲಿ ಯಾಕೆ ನಮ್ಮನ್ನ ಬೀದಿಗೆ ಹಾಕಿದ್ದೀರಾ? 14 ಸಾವಿರ ಶಿಕ್ಷಕರಲ್ಲಿ 7 ಸಾವಿರ ಮಂದಿಯನ್ನ ತೆಗೆದು ಹಾಕಿದ್ರೆ ನಾವು ಎಲ್ಲಿ ಹೋಗಬೇಕು? 7 ಸಾವಿರ ಮಂದಿಯನ್ನು ಶಿಕ್ಷಣ ಇಲಾಖೆಯ ಬೇರೆ ವಿಭಾಗಕ್ಕೆ ಹಾಕಿ. ನಾವೇನಾದರು ಸತ್ತರೆ ಅದಕ್ಕೆ ನೇರವಾಗಿ ನೀವೆ ಹೊಣೆ. ನಾವು ಸಾಕಷ್ಟು ಮಾನಸಿಕವಾಗಿ ಒತ್ತಡದಲ್ಲಿ ಇದ್ದೇವೆ. ಕ್ವಾಲಿಫೈಡ್ ಆಗಿರಬೇಕು ಎಂದು ಈಗ ಸರ್ಕಾರಕ್ಕೆ ನೆನಪು ಆಗಿದ್ಯಾ? 20 ವರ್ಷದಿಂದ ನಮ್ಮ ಸೇವೆಯನ್ನು ಗಮನಿಸಿ. ಎಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂಬುದನ್ನ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.